ಕಲಬುರಗಿ : ರಾಮ ನವಮಿ ಪ್ರಯುಕ್ತ ಶ್ರೀರಾಮ ಸೇನೆ ಆಯೋಜಿಸಿದ್ದ ಭವ್ಯ ಮೆರವಣಿಗೆಯಲ್ಲಿ ಪಿಎಸ್ಐ ಹಗರಣದ ಅಪರಾಧಿ ದಿವ್ಯಾ ಹಾಗರಗಿ ಜೊತೆ ಉಮೇಶ್ ಜಾಧವ್ ರಾಮ ನವಮಿ ಆಚರಣೆ ಮಾಡಿದ್ದಾರೆ. ಜೊತೆಗೆ ಬಿಜೆಪಿ ಮುಖಂಡ ಚಂದೂ ಪಾಟೀಲ್ ಸಹ ಭಾಗಿಯಾಗಿದ್ದಾರೆ. ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಬ್ಲೂಟೂತ್ ಅಕ್ರಮದ ನೇರ ರೂವಾರಿಯಾಗಿ ಜೈಲು ಸೇರಿ ಈಗ ಬೇಲ್ ಮೇಲೆ ಹೊರಗಿರುವ ದಿವ್ಯಾ ಹಾಗರಗಿ ಇಂದು ಉಮೇಶ್ ಜಾಧವ್ ಗೆ ಜೊತೆಯಾಗಿ ನಿಂತು ಚುನಾವಣಾ ಪ್ರಚಾರವನ್ನೂ ನಡೆಸಿದ್ದಾಳೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಈ ಕುರಿತು ಸ್ವತಃ ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿ ಕಲಬುರಗಿಯ ಶ್ರೀರಾಮ ಮಂದಿರದಿಂದ ಜಗತ್ ವೃತ್ತದ ವರೆಗೂ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.ರಾಜ್ಯದ 58,000+ ಹೆಚ್ಚು ಯುವಕರ ಪಾಲಿಗೆ ಕಂಟಕಪ್ರಾಯವಾಗಿದ್ದ ಪಿಎಸ್ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯ ಹಾಗರಗಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಬಿಜೆಪಿಯು ಆಕೆಯನ್ನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಈ ಮೂಲಕ ಸಾಬೀತಾದಂತಾಗಿದೆ. ಇದನ್ನು ಕಂಡು ಕಲಬುರ್ಗಿ ಮತದಾರರು, ವಿಶೇಷವಾಗಿ ಉದ್ಯೋಗಾಕಾಂಕ್ಷಿ ಯುವಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.