ಮಾರಣಾಂತಿಕವಾಗಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಜೀವವನ್ನು ಕೊನೆಗೊಳಿಸುವುದಕ್ಕೆ ಅವಕಾಶ ನೀಡುವ ವಿಧೇಯಕಕ್ಕೆ ಬ್ರಿಟಿಷ್ ಸಂಸದರು ಪ್ರಾಥಮಿಕ ಹಂತದ ಅನುಮೋದನೆ ನೀಡಿದ್ದಾರೆ.
ಸಾವಿಗೆ ನೆರವಾಗುವ ವಿಧೇಯಕ (ಅಸಿಸ್ಟೆಡ್ ಡೈಯಿಂಗ್ ಬಿಲ್), ಬ್ರಿಟನ್ ಸಂಸತ್ನಲ್ಲಿ 330-275 ಮತಗಳೊಂದಿಗೆ ಶುಕ್ರವಾರ ಅಂಗೀಕಾರಗೊಂಡಿತು. ಆದರೆ ವಿಧೇಯಕವು ಅಂತಿಮ ಹಂತದ ಮತದಾನಕ್ಕೆ ಹೋಗುವ ಮುನ್ನ ಅದು ಇನ್ನಷ್ಟು ಪರಿಶೀಲನೆಗೊಳಪಡಲಿದೆ.
ಶುಕ್ರವಾರ ವಿಧೇಯಕವನ್ನು ಮತಕ್ಕೆ ಹಾಕುವ ಮುನ್ನ ಹಲವು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಯಿತು. ದಯಾಮರಣಕ್ಕೆ ಸಂಬಂಧಿಸಿದಂತೆ ನೈತಿಕತೆ, ನಂಬಿಕೆ ಹಾಗೂ ಕಾನೂನು ಇವುಗಳ ಬಗ್ಗೆಯೂ ಚರ್ಚಿಸಲಾಯಿತು.