ಬೆಂಗಳೂರು: ಆಧಾರ್ ಮಾಹಿತಿಯನ್ನು ಹಲವು ರೀತಿಯಲ್ಲಿ ದುರ್ಬಳಕೆ ಮಾಡಬಹುದು. ಆಧಾರ್ ನಂಬರ್ ಬಳಸಿ ಒಬ್ಬರ ಬ್ಯಾಂಕ್ ಅಕೌಂಟ್ನಿಂದ ಹಣವನ್ನೂ ಹಿಂಪಡೆಯಬಹುದು. ಈ ರೀತಿ ಆಧಾರ್ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಬಹುದು. ಹತ್ತು ವರ್ಷದವರೆಗೂ ಜೈಲುಶಿಕ್ಷೆ ಕಾದಿರುತ್ತದೆ.
ಆಧಾರ್ ಸಂಬಂಧಿಸಿದ ಯಾವ್ಯಾವ ಅಪರಾಧಗಳಿಗೆ ಯಾವ್ಯಾವ ಶಿಕ್ಷೆ ಇದೆ, ಪಟ್ಟಿ ಇಲ್ಲಿದೆ.
ಆಧಾರ್ಗೆ ನೊಂದಣಿ ಮಾಡಿಸುವಾಗ ಬಯೋಮೆಟ್ರಿಕ್ ಮತ್ತು ಹೆಸರು ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ತಪ್ಪಾಗಿ ನೀಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಬಹುದು. ಅಥವಾ 10,000 ರೂವರೆಗೆ ದಂಡ ಕಟ್ಟಬೇಕಾಗಬಹುದು. ಅಥವಾ ಎರಡೂ ದಂಡನೆ ಪಡೆಯಬಹುದು.
Water After Tea: ಟೀ ಕುಡಿದ ನಂತ್ರ ನೀರು ಕುಡಿಯುತ್ತೀರಾ..? ಮೊದಲು ನಿಲ್ಲಿಸಿ – ಈ ಸ್ಟೋರಿ ನೋಡಿ
ವ್ಯಕ್ತಿಗಳ ಗುರುತು ದಾಖಲೆಯನ್ನು ಸಂಗ್ರಹಿಸುವ ಅಧಿಕೃತ ಸಂಸ್ಥೆ ಎಂದು ಹೇಳಿಕೊಂಡು ಮಾಹಿತಿ ಪಡೆದರೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂವರೆಗೂ ದಂಡ ವಿಧಿಸುವ ಅವಕಾಶ ಇರುತ್ತದೆ. ಆಧಾರ್ ಎನ್ರೋಲ್ಮೆಂಟ್ ಅಥವಾ ದೃಢೀಕರಣದ ವೇಳೆ ಸಂಗ್ರಹಿಸಲಾದ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗೆ ರವಾನಿಸಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂವರೆಗೂ ದಂಡ ವಿಧಿಸುವ ಅವಕಾಶ ಇರುತ್ತದೆ.
ಆಧಾರ್ ದತ್ತಾಂಶ ಸಂಗ್ರಹವಾಗಿರುವ ಸಿಐಡಿಆರ್ಗೆ ಅನಧಿಕೃತ ಪ್ರವೇಶ ಮಾಡಿದರೆ, ಅಥವಾ ಹ್ಯಾಕಿಂಗ್ ಮಾಡಿದರೆ 10 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ ದಂಡ ವಿಧಿಸಲಾಗುತ್ತದೆ. ಸಿಐಡಿಆರ್ನಲ್ಲಿನ ದತ್ತಾಂಶವನ್ನು ತಿರುಚಿದರೆ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು 10,000 ರೂವರೆಗೆ ದಂಡ ಕಟ್ಟಬೇಕಾಗಬಹುದು.
ಆಧಾರ್ ಕಾರ್ಡ್ದಾರರ ಗುರುತು ಮಾಹಿತಿಯನ್ನು ಕೋರಿ ಪಡೆಯುವ ಸಂಸ್ಥೆ ಆ ಮಾಹಿತಿಯನ್ನು ಅನಧಿಕೃತವಾಗಿ ಬಳಕೆ ಮಾಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ ಮತ್ತು 10,000 ರೂವರೆಗೆ ದಂಡ ಕಟ್ಟಬೇಕಾಗುತ್ತದೆ ಎನ್ನಲಾಗಿದ್ದು, ಕೊಂಚ ಹುಷಾರಾಗಿರಿ.