ಚಾಮರಾಜನಗರ : ಪವಾಡ ಪುರುಷ ಮಲೆಮಹದೇಶ್ವರಬೆಟ್ಟದಲ್ಲಿ ಮಾದಪ್ಪನ ದಿವ್ಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಕಾವೇರಿ ನದಿ ನೀರಿನಲ್ಲಿ ಕಾಲ್ನಡಿಗೆಯಲ್ಲಿ ನಡೆದು ಬರುತ್ತಿದ್ದಾರೆ.
ಮಹಾಶಿವರಾತ್ರಿ ಜಾತ್ರೋತ್ಸವ ಪ್ರಯುಕ್ತ ಪವಾಡ ಪುರುಷ ಮಲೆಮಹದೇಶ್ಚರಬೆಟ್ಟಕ್ಕೆ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಕಾವೇರಿ ನದಿಯನ್ನು ಕಾಲ್ನಡಿಯಲ್ಲಿಯೇ ಸಾಗಿ ಮಾದಪ್ಪನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.
ಶಿವರಾತ್ರಿ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ; ಕಾವೇರಿ ನದಿಯ ಬಳಿ ಬಿಗಿ ಭದ್ರತೆ
ಇದೇ ತಿಂಗಳು ಫೆಬ್ರವರಿ 26 ರಂದು ನಡೆಯುವ ಮಹಾಶಿವರಾತ್ರಿಯಂದು ಮಾದಪ್ಪನ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಆಗಮಿಸುತ್ತಿರುವ ಭಕ್ತರು ಶಾಗ್ಯ ಬಳಿಯ ಕಾವೇರಿ ನದಿ ಪಾತ್ರದಲ್ಲಿ ಮಿಂದು ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದಾರೆ. ಮಂಡ್ಯ, ರಾಮನಗರ , ಬೆಂಗಳೂರು ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಸಂಖ್ಯೆಯ ಭಕ್ತರು ಶಾಗ್ಯ ಸಮೀಪದ ಕಾವೇರಿ ಒಡಲಿನ ಕಾವೇರಿ ಸಂಗಮದಲ್ಲಿ ಮಿಂದು ನೀರಿನೊಳಗೆ ಕಾಲ್ನಡಿಯಲ್ಲಿಯೇ ಸಾಗಿ ಮಹಾಶಿವರಾತ್ರಿಯ ಮುನ್ನಾ ದಿನ ಮಾದಪ್ಪನ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.