ಉಡುಪಿ: ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಮಣಿಪಾಲ ಪೊಲೀಸರು ಫೈರಿಂಗ್ ಮಾಡಿರುವಂತಹ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ನಡೆದಿದೆ. ಇತ್ತೀಚಿಗೆ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡು ಕಣ್ಮರೆಯಾಗಿದ್ದನು.
ದರೋಡೆ ಪ್ರಕರಣವೊಂದರ ಸಂಬಂಧ ಮಣಿಪಾಲ ಪೊಲೀಸರು ಇಸಾಕ್ ಬೆನ್ನು ಹತ್ತಿದ್ದರು. ಈ ವೇಳೆ ಹಾಸನದ ಚನ್ನರಾಯಪಟ್ಟಣದಿಂದ ಬಂಧಿಸಿ ಉಡುಪಿಗೆ ವಿಚಾರಣೆಗೆ ಕರೆದುಕೊಂಡು ಬರುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಪ್ರಕರಣದಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು, ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಶದಲ್ಲಿರುವ ಮೂವರು ಆರೋಪಿಗಳ ವಿಚಾರಣೆ ಮುಂದುವರಿದಿದೆ. ಮೂತ್ರ, ವಾಂತಿ ಬರುತ್ತದೆ ಎಂದು ಹೇಳಿ ಪರಾರಿಯಾಗಲು ಯತ್ನಿಸಿದ್ದರು. ಮಣಿಪಾಲ, ಹಿರಿಯಡ್ಕ-ಮಲ್ಪೆ ಮೂವರು ಪೊಲೀಸ್ ಸಿಬ್ಬಂದಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.