ನವದೆಹಲಿ:- ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನೀವು ದಾಂಧಲೆ ಮಾಡೋಕೆ ಇದೇನು ಪಾಕಿಸ್ತಾನ ಅಲ್ಲ: ಮುಸ್ಲಿಮರಿಗೆ ಮುತಾಲಿಕ್ ವಾರ್ನ್!
ಮೈಸೂರಿನಲ್ಲಿ ಪೊಲೀಸ್ ಸ್ಟೇಷನ್ ಮೇಲೆ ರಾಜಕಾರಣಿಗಳ ಕುಮ್ಮಕ್ಕಿನಿಂದ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿಯಾಗಿದೆ. ಸಿಎಂ ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದರು.
ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ಒಂದು ವರ್ಗ ಮತ್ತು ಸಂಘಟನೆ, ನಮ್ಮ ಇಡೀ ದೇಶ ಹಾಗೂ ವ್ಯವಸ್ಥೆಯನ್ನು ಸವಾಲು ಮಾಡುವ ರೀತಿ ಕಾರ್ಯ ಚಟುವಟಿಕೆ ಮಾಡುತ್ತಿವೆ. ಪಿಎಫ್ಐ ನಿಷೇಧ ಆಗಿದೆ. ಆದರೂ ಕೂಡ ಆ ಸಂಸ್ಥೆಯ ಕಾರ್ಯಕರ್ತರು ಬೇರೆ ಬೇರೆ ಹೆಸರಿನಲ್ಲಿ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ ಎಂದರು.
ನಮ್ಮ ಸರ್ಕಾರ ಇದ್ದಾಗ ಕಠಿಣ ಕ್ರಮ ಕೈಗೊಂಡು ಹಲವಾರು ಜನರನ್ನು ಜೈಲಿಗೆ ಹಾಕಿದ್ದೆವು. ಈ ಸರ್ಕಾರ ಬಂದ ಮೇಲೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದವರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದು ಅವರೆಲ್ಲರೂ ಅಮಾಯಕರು ಎಂದು ಹೇಳಿದರು.