ಬೆಂಗಳೂರು:- ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಜರುಗಿದೆ.
Power Cut: ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್: ಎಲ್ಲೆಲ್ಲಿ ಗೊತ್ತಾ!?
ದೀಪು (20), ಯೋಗಿಶ್ವರನ್ (20) ಮೃತ ವಿದ್ಯಾರ್ಥಿಗಳು. ಹೆಬ್ಬಗೋಡಿಯ ಕಾಲೇಜುವೊಂದರ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಗೆ ಈಜಲು ತೆರಳಿದ್ದರು. ಈ ಪೈಕಿ ದೀಪು, ಯೋಗೀಶ್ವರನ್ಗೆ ಈಜಲು ಆಗದೆ ಪರಾದಾಟ ನಡೆಸಿದ್ದಾರೆ. ಕೆಲಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ವಿದ್ಯಾರ್ಥಿಗಳು ಮುಳುಗುತ್ತಿದ್ದ ವೇಳೆ ರಕ್ಷಣೆ ಮಾಡಲು ಸಾಧ್ಯವಾಗದೇ ಉಳಿದ ಸ್ನೇಹಿತರು ಪರದಾಡಿದ್ದಾರೆ. ಈಜಲು ಬಾರದೇ ಒಬ್ಬರಾದ ಮೇಲೆ ಒಬ್ಬರಂತೆ ನೀರಿನಲ್ಲಿ ಮುಳುಗಿ ಸ್ನೇಹಿತರ ಕಣ್ಣೆದುರೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ