ಅವ್ರಿಬ್ರು ಸಹೋದರಿಯರು..ಒಟ್ಟಿಗೆ ಬೈಕ್ ತಗೊಂಡು ಮನೆಯಿಂದ ಹೊರಟಿದ್ರು..ಆದ್ರೆ ಹೋಗ್ತಿದ್ದ ಮಾರ್ಗದಲ್ಲಿಯೇ ಜವರಾಯ ಕಾದು ಕುಳಿತಿದ್ದ..ಕಸದ ಲಾರಿ ರೂಪದಲ್ಲಿ ಯಮ ಇಬ್ಬರನ್ನು ಬಲಿ ಪಡೆದಿದ್ದಾನೆ..ಭೀಕರವಾದ ಅಪಘಾತಕ್ಕ ಅಕ್ಕ ತಂಗಿ ಇಬ್ಬರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಕೂಡಿ ಬಾಳಬೇಕಾದವರು ದೂರಾ…..ದೂರಾ…..! ಅಸಮಣೆ ಏರಿದ ಜೋಡಿ ಕೂಡಿ ಬಾಳಲೇ ಇಲ್ಲ!
ಹೌದು..ಈ ಫೋಟೊದಲ್ಲಿ ಕಾಣ್ತಿರೊ ಮಹಿಳೆಯರ ಹೆಸರು 38 ವರ್ಷದ ನಿಗಾರ್ ಇರ್ಫಾನ ಮತ್ತು 30 ನಿಗಾರ್ ಸುಲ್ತಾನ..ಗೋವಿಂದಪುರ ನಿವಾಸಿಳಾಗಿದ್ದು ಇವ್ರಿಬ್ರುರು ಸಹೋದರಿಯರು..ಕೆಲಸದ ನಿಮಿತ್ತ ಟಿವಿಎಸ್ ಜುಪಿಟರ್ ಬೈಕ್ ತಗೊಂಡು ಇವತ್ತು ಬೆಳಗ್ಗೆ ಹೆಗಡೆನಗರದತ್ತ ತೆರಳಿದ್ದಾರೆ ಆದ್ರೆ 11 ಗಂಟೆಗೆ ಸಾರಾಯಿಪಾಳ್ಯ ಬಳಿ ಬರ್ತಿದ್ದಂತೆ ಬೈಕ್ ಎಡದಿಂದ ಬಲಕ್ಕೆ ತೆಗೆದುಕೊಂಡಿದ್ದಾರೆ..ಈ ವೇಳೆ ಹಿಂಬದಿಯಿಂದ ವೇಗವಾಗಿ ಬರ್ತಿದ್ದ ಕಸದ ಲಾರಿ ಬೈಕ್ ಗೆ ಡಿಕ್ಕಿಯಾಗಿದ್ದು..ಇಬ್ಬರು ಬಲಕ್ಕೆ ಹಾರಿ ಬಿದ್ದಿದ್ದಾರೆ..ನಿಯಂತ್ರಣ ಕಳೆದುಕೊಂಡ ಚಾಲಕ ಇಬ್ಬರು ಮಹಿಳೆಯರ ಮೇಲೆ ಕಸದ ಲಾರಿ ಹರಿಸಿದ್ದು..ಹಿಂಬದಿ ಚಕ್ರಕ್ಕೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ..
ಘಟನೆಗೆ ಸಂಬಂಧ ಪಟ್ಟಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..ಇಂತಹ ಘಟನೆ ಇಲ್ಲಿ ಆಗಾಗ ಮರುಕಳಿಸುತ್ತಲೇ ಇರುತ್ತೆ..ಕಸದ ಲಾರಿ ಚಾಲಕರು ಕುಡಿದು ಚಾಲನೆ ಮಾಡುವುದರಿಂದ ಇಂತಹ ದುರಂತಗಳು ಸಂಭವಿಸುತ್ತದೆ..ಇದಕ್ಕೆ ಬಿಬಿಎಂಪಿ ಆಗಲಿ ಪೊಲೀಸರಾಗಲಿ ಕಡಿವಾಣ ಹಾಕಬೇಕು ಅಂತಾ ಮನವಿ ಮಾಡಿಕೊಂಡ್ರು..
ಇನ್ನೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಹೆಣ್ಣೂರು ಸಂಚಾರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ..ಅಲ್ಲದೇ ಕಸದ ಲಾರಿ ಮತ್ತು ಚಾಲಕ ಗಢಿಲಿಂಗನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ..ಪರಿಶೀಲನೆ ವೇಳೆ ಚಾಲಕ ಮದ್ಯಪಾನ ಮಾಡಿಲ್ಲ ಅನ್ನೋದು ಗೊತ್ತಾಗಿದೆ..ಸದ್ಯ ಪ್ರಕರಣ ದಾಖಲಿಸಿಕೊಂಡಿರೊ ಹೆಣ್ಣೂರು ಸಂಚಾರ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ..