ಹಾವೇರಿ:- ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 48ರ ಬ್ರಿಡ್ಜ್ ಬಳಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.
Hubballi: ಅರಣ್ಯ ಒತ್ತುವರಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಿ ಸಚಿವ ಈಶ್ವರ ಖಂಡ್ರೆ!
ಸಿದ್ದು(24) ಹಾಗೂ ಪ್ರೀತಮ್(25) ಮೃತ ಕೂಲಿ ಕಾರ್ಮಿಕರು. ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದ್ದಾಗ ರೋಲರ್ ಹರಿದು ಸಾವನ್ನಪ್ಪಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಶವವಿಟ್ಟು ಕುಟುಂಬಸ್ಥರು, ಜನರಿಂದ ಪ್ರತಿಭಟನೆ ಮಾಡಲಾಗಿದೆ. ಸ್ಥಳಕ್ಕೆ ಗುತ್ತಿಗೆದಾರರು ಬರುವವರೆಗೂ ಶವ ಸ್ಥಳಾಂತರಿಸದಿರಲು ನಿರ್ಧಾರ ಮಾಡಲಾಗಿದೆ. ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಲು ಒತ್ತಾಯಿಸಲಾಗಿದೆ.