ಕೊಪ್ಪಳ: ಸಾಣಾಪುರದಲ್ಲಿ ವಿದೇಶಿ ಪ್ರವಾಸಿಗರು, ಮಹಿಳೆಯರ ಮೇಲೆ ಹಲ್ಲೆ ಮತ್ತು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಲ್ಲೇಶ್ ಹಾಗೂ ಸಾಯಿ ಚಂದನ್ ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಇನ್ನೂ ಈ ಬಗ್ಗೆ ಗಂಗಾವತಿಯಲ್ಲಿ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿತ್ತು. ಗುರುವಾರ ರಾತ್ರಿ 11:00ಗೆ ನಡೆದಿದ್ದ ಘಟನೆಯಲ್ಲಿ ರಾತ್ರಿ ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿ ದುಡ್ಡು ದೋಚಲು ಯತ್ನಿಸಲಾಗಿತ್ತು.
ಕೊಪ್ಪಳದಲ್ಲಿ ತಲೆತಗ್ಗಿಸುವ ಘಟನೆ ; ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ
ಮೂವರು ಪುರುಷರನ್ನು ಕಾಲುವೆಗೆ ದೂಡಿದ್ದರು, ಇಬ್ಬರೂ ಈಜಿ ಪಾರಾಗಿದ್ದರು. ಇನ್ನೊಬ್ಬ ವ್ಯಕ್ತಿಯ ಮೃತ ದೇಹ ಎಂದು ಬೆಳಿಗ್ಗೆ ಪತ್ತೆಯಾಗಿತ್ತು. ಅಲ್ಲದೇ ಹೋಂ ಸ್ಟೇ ಮಾಲಕಿ ಹಾಗೂ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದರು. ದುಷ್ಕರ್ಮಿಗಳ ಪತ್ತೆಗೆ ಆರು ತಂಡಗಳನು ರಚಿಸಲಾಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ದುಷ್ಕರ್ಮಿಯ ಶೋಧಕಾರ್ಯ ನಡೆಸಲಾಗುತ್ತಿದೆ.