ಬೆಂಗಳೂರು: ಇಬ್ಬರು ಅಲ್ ಖೈದಾ (Al-Qaeda) ಉಗ್ರರಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ (NIA Special Court) 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಖ್ತರ್ ಹುಸೇನ್ ಲಷ್ಕರ್ ಮತ್ತು ಅಬ್ದುಲ್ ಅಲೀಂ ಮೊಂಡಲ್ಗೆ ಕೋರ್ಟ್ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. 2022ರ ಆಗಸ್ಟ್ 30ರಂದು ಪ್ರಕರಣ ದಾಖಲಾಗಿತ್ತು.
ಇಬ್ಬರು ಉಗ್ರರು ವಿದೇಶದಲ್ಲಿರುವ ಹ್ಯಾಂಡ್ಲರ್ಗಳಿಂದ ಆನ್ಲೈನ್ ಮೂಲಕ ಮನ ಪರಿವರ್ತನೆಗೊಂಡು ಅಲ್ ಖೈದಾಗೆ ಹೊಸ ಯುವಕರನ್ನು ಸೇರ್ಪಡೆಗೊಳಿಸುತ್ತಿದ್ದರು. ಬಳಿಕ ಟೆಲಿಗ್ರಾಂ ಗ್ರೂಪ್ಗಳಿಗೆ ಸೇರಿಸಿ ಅಫ್ಘಾನಿಸ್ತಾನಕ್ಕೆ ತೆರಳಲು ಪ್ಲಾನ್ ಮಾಡುತ್ತಿದ್ದರು.
ಅಸ್ಸಾಂ (Assam) ಮೂಲದ ಅಖ್ತರ್ ಹುಸೇನ್ನ್ನು ಸಿಸಿಬಿ ಪೊಲೀಸರು ಮೊದಲು ಬಂಧಿಸಿದ್ದರು. ಈತ ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿ ಕೋಣೆಯಲ್ಲಿ ಕೆಲ ಯುವಕರೊಂದಿಗೆ ವಾಸ್ತವ್ಯ ಹೂಡಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ