ಬೆಂಗಳೂರು/ಮೈಸೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮುಡಾ ಹಗರಣ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ದೂರುದಾರ ಕೃಷ್ಣ ಎನ್ನುವವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು.
ಭೀಕರ ಅಪಘಾತ: ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ಐವರು ದುರ್ಮರಣ, ಹಲವರು ಗಂಭೀರ!
ದೂರಿನ ಹಿನ್ನೆಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲಾಗಿದೆ. ಅಲ್ಲದೆ ಪ್ರಕರಣ ಸಂಬಂಧ ಲೋಕಾಯುಕ್ತ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದೆ. 50:50 ಅನುಪಾತದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಿಂಪಡೆದಿತ್ತು. ಮುಡಾದ ಈ ನಿರ್ಧಾರದಿಂದ ನಿವೇಶನ ಪಡೆದವರಿಗೆ ಸಂಕಷ್ಟ ಶುರುವಾಗಿದೆ. ಇನ್ನು, ಮುಡಾ ಹಂಚಿಕೆ ಮಾಡಿದ್ದ 211 ನೀವೇಶನ ಪಟ್ಟಿ ಲಭ್ಯವಾಗಿದ್ದು, ಯಾರಿಗೆ ಎಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಒಟ್ಟು 241 ನಿವೇಶನ ಮಂಜೂರಾಗಿದ್ದು, ಇದರಲ್ಲಿ 211 ನಿವೇಶನಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಅಬ್ದುಲ್ ವಾಜಿದ್ ಎಂಬುವರಿಗೆ 26 ನಿವೇಶನ ಮಂಜೂರು ಮಾಡಲಾಗಿದೆ. ಯಾವತ್ತೋ ವಶಪಡಿಸಿಕೊಂಡ ಭೂಮಿಗಳಿಗೆ 2020 ರಿಂದ 2023ರ ಅವಧಿಯಲ್ಲಿ ಆಯುಕ್ತರ ತೀರ್ಮಾನದಂತೆ ಸೈಟ್ ಹಂಚಿಕೆ ಮಾಡಲಾಗಿದೆ.
ಮುಡಾ 50-50 ನಿಯಮದಡಿ ಸೈಟ್ ಪಡೆದವರ ಪಟ್ಟಿ
ಎಂ.ಸಿ.ಪದ್ಮಾ ಮಕ್ಕಳಾದ ಬ್ರಿಜೇಸ್ ಅರಸ್ – 5
ಸುಶೀಲ ಮಕ್ಕಳಾದ ಸುಮಂತ್ ಅರಸ್, ಜಯಂತ್ ಅರಸ್ – 6
ಮನು ಅರಸ್, ಜಯಂತ್, ಅರ್ಚನಾ, ಸುಮಂತ್ – 4
ಪೊ.ಮಹದೇವ್ ಮತ್ತು ಗೀತಾ – 12
ಅಬ್ದುಲ್ ವಾಜಿದ್ – 26
ಸೈಯದ್ ಯುಸಫ್ – 21
ರೂಪ – 3
ಪ್ರೇಮಾ- 2
ಕನಕ -3
ಲೋಕೇಶ್- 2
ರವಿ – 2
ನಿಂಗಪ್ಪ- 2
ಲಕ್ಷಿ- 1
ವೈರಮುಡಿ- 7
ಮಲ್ಲಪ್ಪ- 19
ಸುರೇಶಮ್ಮ- 11
ಮಹದೇವಮ್ಮ -1
ವಿಶಕಂಠ – 4
ಸಿದ್ದಯ್ಯ – 4
ಕಮಲಮ್ಮ – 1
ಕೆ.ಪಿ.ಶಿವಪ್ರಸಾದ್ – 1
ಸೈಯದ್ ನುಸ್ರುತ – 4
ವೈಶಾಲಿ – 1
ಪ್ರವೀಣ್ – 2
ಸಿ.ಕೆ.ಬಾಸ್ಕರ್ – 1
ಸಿ.ಜೆ.ರಾಜರಾಮ್ – 1
ಚೌಡಯ್ಯ – 7
ಕ್ಯಾಥಡ್ರಲ್ ಸೊಸೈಟಿ ಕಾರ್ಯದರ್ಶಿ ಅಲಮೇಡಾ – 6
ಸುನಂದ – 1
ಎಸ್.ಜಿ. ಶಿವಶಂಕರ್ – 1
ಕೆ.ರಘುವೀರ್ ಕಾಮತ್ – 1
ವಿಮಲಾ – 1
ನಾಗರತ್ನ – 1
ವೆಂಕಟಪ್ಪ – 17
ದೇವಮ್ಮ – 16
ಆಲನಹಳ್ಳಿ ಗೃಹನಿರ್ಮಾಣ ಸಹಕಾರ ಸಂಘ-ಅಧ್ಯಕ್ಷ/ಕಾರ್ಯದರ್ಶಿ – 13 ನಿವೇಶನ ಹಂಚಿಕೆ ಮಾಡಲಾಗಿದೆ.