ಮೊದಲ ಬಾರಿಗೆ ಬಿಗ್ ಬಾಸ್ ಇನ್ನೂ ಎರಡು ವಾರಗಳ ಕಾಲ ಇರುವಾಗಲೇ ನೇರವಾಗಿ ಫಿನಾಲೆ ವೇದಿಕೆಗೆ ಒಬ್ಬ ಕಂಟೆಸ್ಟೆಂಟ್ ಹೋಗುವಂತಹ ಅವಕಾಶವನ್ನು ನೀಡಿದ್ದಾರೆ. ಅದಕ್ಕಾಗಿಯೇ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಹುತೇಕರು ವೈಯಕ್ತಿಕವಾಗಿ ಆಡಬೇಕಾಗಿದ್ದರಿಂದ ಪ್ರತಿ ಟಾಸ್ಕ್ ಕೂಡ ರೋಚಕವಾಗಿದ್ದವು. ವಾರ ಪೂರ್ತಿ ನಡೆದ ಟಿಕೆಟ್ ಟು ಟಾಸ್ಕ್ನಲ್ಲಿ ಪ್ರತಿ ನಾಲ್ವರು ಆಡಬೇಕಿತ್ತು. ಸರದಿ ಬಂದಾಗ ಪ್ರತಿ ಆಟಗಾರ ಕೂಡ ತನ್ನೊಂದಿಗೆ ಆಡಲು ಮೂವರು ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.
ಹೀಗೆ ಎಂಟು ರೌಂಡ್ಸ್ನಲ್ಲಿ ಆಟ ನಡೆದಿತ್ತು. ಎಂಟು ಸ್ಪರ್ಧಿಗಳಿಗೂ ಅಂಕಗಳನ್ನು ನೀಡಲಾಗಿತ್ತು. ಹೆಚ್ಚು ಯಾರು ಅಂಕ ಪಡೆಯುತ್ತಾರೋ ಅವರೇ ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎನ್ನುವುದು ಬಿಗ್ ಬಾಸ್ ನಿಯಮವಾಗಿತ್ತು. ಇಂದು ಬೆಳಗ್ಗೆ ವಾಹಿನಿಯು ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪ್ರತಾಪ್ ಅವರೇ ಟಾಪ್ ಎಂದು ತೋರಿಸಲಾಗಿದೆ. ಜೊತೆಗೆ ಆಟದಿಂದ ಸಂಗೀತಾ (Sangeetha) ಅವರನ್ನು ಪ್ರತಾಪ್ ಹೊರಗಿಟ್ಟ ಕಾರಣದಿಂದಾಗಿ ಸಂಗೀತಾ ಫಿನಾಲೆಗೆ ಬರುವುದಿಲ್ಲ ಎನ್ನುವಂತೆ ಬಿಂಬಿಸಲಾಗಿದೆ.
ಆದರೆ, ಸಿಕ್ಕಿರುವ ಮಾಹಿತಿಯ ಪ್ರಕಾರ ಫಿನಾಲೆಗೆ ಹೋಗುವ ಟಿಕೆಟ್ ಅನ್ನು ಸಂಗೀತಾ ಪಡೆದಿದ್ದಾರೆ. ಪ್ರತಾಪ್ 280 ಅಂಕ ಪಡೆದಿರುವ ಮತ್ತು ಸಂಗೀತಾ 260 ಪಾಯಿಂಟ್ ಇರುವ ಬೋರ್ಡ್ ಅನ್ನು ತೋರಿಸಲಾಗಿದ್ದರೂ, ಕೊನೆಗೊಂದು ಟ್ವಿಸ್ಟ್ ನೀಡಲಾಗಿತ್ತಂತೆ. ಈ ವಾರ ಕ್ಯಾಪ್ಟನ್ಸಿಗಾಗಿ ಟಾಸ್ಕ್ ವೊಂದನ್ನು ಬಿಗ್ ಬಾಸ್ ನೀಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ ಜೊತೆ ಫಿನಾಲೆ ಟಿಕೆಟ್ ಟಾಸ್ಕ್ ಕೂಡ ಜೋಡಿಸಿದ್ದಾರೆ. ಈ ವೇಳೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಸಂಗೀತಾ ಫಿನಾಲೆ ಟಿಕೆಟ್ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದು ನಿಜವಾ? ಅಥವಾ ಸುಳ್ಳಾ? ಎಂದು ಖಾತರಿ ಆಗಲಿ ಇಂದು ರಾತ್ರಿವರೆಗೂ ಕಾಯಬೇಕಿದೆ.