ಟೆಹ್ರಾನ್: ಇರಾನ್ನಲ್ಲಿ ಅವಳಿ ಬಾಂಬ್ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಇರಾನ್ನ ದಕ್ಷಿಣ ನಗರಿ ಕೆರ್ಮಾನ್ನಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ (Iranian general Qasem Soleimani) ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆ ನಡೆದಿದ್ದು, ಭಾರೀ ಆತಂಕವನ್ನೂ ಸೃಷ್ಟಿ ಮಾಡಿದೆ.
2020ರಲ್ಲಿ ಅಮೆರಿಕಾವು ಬಾಗ್ದಾದ್ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ (US drone strike in Iraq) ನಡೆಸಿತ್ತು. ಈ ದಾಳಿಯಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಇವರ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರತಿ ವರ್ಷ ಇರಾನ್ನಲ್ಲಿ ಆಯೋಜಿಸಲಾಗುತ್ತಿದೆ. ಕೆರ್ಮಾನ್ನಲ್ಲಿರುವ ಕಾಸ್ಸೇಮ್ ಸೋಲೈಮನಿ ಅವರ ಸ್ಮಾರಕದ ಬಳಿಯೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತ.? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ
ಈ ವರ್ಷದ ಕಾರ್ಯಕ್ರಮವನ್ನು ಇಆಯೋಜನೆ ಮಾಡಲಾಗಿದ್ದು, ಇದೇ ಸಂದರ್ಭ ಅವಳಿ ಬಾಂಬ್ ಸ್ಫೋಟ (Bomb Blast) ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಭಯಾನಕ ಸ್ಪೋಟಗಳು ಸಂಭವಿಸಿದವು ಎಂದು ಇರಾನ್ನ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯಿಂದ ಮೊದಲು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಸಂಜೆಯ ವೇಳೆಗೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, 103 ದಾಟಿತ್ತು. 141ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಬಾಂಬ್ ಸ್ಟೋಟಗಳಿಂದ ಗಾಯಗೊಂಡ ಹಲವರ ಆಕ್ರಂದನ, ಅಲ್ಲಿನ ರಕ್ತಸಿಕ್ತ ಪರಿಸ್ಥಿತಿಯನ್ನು ಕಂಡು ಹಲವರು ನಿಂತಲ್ಲೇ ಕುಸಿದು ಬಿದ್ದ ಪ್ರಸಂಗವೂ ನಡೆದಿದೆ.