ಬೆಂಗಳೂರು:- ಬಿಬಿಎಂಪಿ ವಾರ್ಡ್ಗಳನ್ನು 75 ಉಪ ವಿಭಾಗಗಳಾಗಿ ವಿಂಗಡಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 225 ವಾರ್ಡ್ಗಳನ್ನು ಪುನರ್ ರಚಿಸಿ ಅಧಿಸೂಚಿಸಲಾಗಿರುವ ಸರಕಾರ ಆದೇಶವನ್ನು ಪಾಲಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಈ ವಾರ್ಡ್ಗಳನ್ನು 75 ಕಂದಾಯ, ಕಾಮಗಾರಿ ಮತ್ತು ಆರೋಗ್ಯ ಉಪ ವಿಭಾಗಗಳಾಗಿ ವಿಂಗಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಹೊಸ ಉಪ ವಿಭಾಗ ಹಾಗೂ ವಾರ್ಡ್ಗಳ ಅನ್ವಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಿದ್ದಾರೆ.