ಹೈದರಾಬಾದ್: ತೆಲಂಗಾಣದ ನಿರ್ಮಾಣ ಹಂತದಲ್ಲಿರುವ ಸುರಂಗವೊಂದು ಕುಸಿದಿದ್ದು, ಅವಶೇಷಗಳಡಿ 8 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸುರಂಗದಲ್ಲಿ ಸಿಲುಕಿರುವ ಜಾರ್ಖಂಡ್ನ ನಾಲ್ವರು ಕಾರ್ಮಿಕರು ಗುಮ್ಲಾ ಜಿಲ್ಲೆಗೆ ಸೇರಿದವರು ಎನ್ನಲಾಗುತ್ತಿದೆ.
ಕಳೆದ ನಾಗರ್ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಎಡದಂಡೆ ಕಾಲುವೆಯ ಭಾಗವಾದ ನಿರ್ಮಾಣ ಹಂತದ ಸುರಂಗ ಕುಸಿದಿದ್ದೆ. ಶ್ರೀಶೈಲಂನಿಂದ ದೇವರಕೊಂಡಕ್ಕೆ ನೀರು ಸಾಗಿಸಲು ಸುರಂಗ ನಿರ್ಮಾಣ ಮಾಡಲಾಗುತ್ತಿದ್ದು, ಸುರಂಗದೊಳಗಿನ ಸೋರಿಕೆ ಸರಿಪಡಿಸಲು 50 ಕಾರ್ಮಿಕರ ಗುಂಪು ತೆರಳಿತ್ತು. ಕಾರ್ಯಾಚರಣೆ ವೇಳೆ ಸುರಂಗದ ವೇಳೆ ಕುಸಿದಿದ್ದು, 200 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಬಿದ್ದಿದೆ. ಘಟನೆಯಲ್ಲಿ 42 ಕಾರ್ಮಿಕರು ಹೊರ ಬಂದು ಜೀವ ಉಳಿಸಿಕೊಂಡಿದ್ದು,ಗಾಯಗೊಂಡಿರುವ 13 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.