ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಯು5 ಈವೆಂಟ್ನಲ್ಲಿ ಭಾರತದ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯರ SU5 ವಿಭಾಗದಲ್ಲಿ ಚೊಚ್ಚಲ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ತುಳಸಿಮತಿ ಮುರುಗೇಶನ್ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಟೆರಸ್ ಮೇಲೆ ಬರ್ತಾನೆ ಮಹಿಳೆಯರ ಒಳ ಉಡುಪು ಕದ್ದು ಹೋಗ್ತಾನೆ: ಈತನೊಬ್ಬ ವಿಚಿತ್ರ ಕಾಮುಕ!
ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಚೀನಾದ ಕ್ಯು ಕ್ಸಿಯಾ ಯಾಂಗ್ ವಿರುದ್ಧ 0-2 (17-21, 10-21) ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಇದರೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಪದಕಗಳ ಸಂಖ್ಯೆ ಎರಡಂಕಿ ಮುಟ್ಟಿದೆ. ತುಳಸಿಮತಿ ಮುರುಗೇಶನ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಬೇಕಾಗಿ ಬಂದರೂ ಈ ಪಂದ್ಯ ಅವರಿಗೆ ಹಾಗೂ ಇಡೀ ದೇಶಕ್ಕೆ ವಿಶೇಷವಾಗಿದೆ. ಈ ಮೊದಲು ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಯಾವುದೇ ಮಹಿಳಾ ಆಟಗಾರ್ತಿ ಪದಕ ಗೆದ್ದಿರಲಿಲ್ಲ. ಚೀನಾದ ಯಾಂಗ್ ಕ್ಯು ಜಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತುಳಸಿಮತಿ ಮುರುಗೇಶನ್ ಉತ್ತಮ ಆರಂಭ ನೀಡಿದರೂ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಸೆಟ್ ಅನ್ನು 17-21 ರಲ್ಲಿ ಸೋತ ಅವರು ಎರಡನೇ ಸೆಟ್ ಅನ್ನು 10-21 ರಿಂದ ಕಳೆದುಕೊಂಡರು. ಇದರಿಂದಾಗಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.