ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಒಂದಲ್ಲ ಒಂದು ಧಾನ್ಯಗಳನ್ನು ಹೊಂದಿದ್ದಾರೆ, ಅದು ಗೋಧಿ ಅಥವಾ ಅಕ್ಕಿ ಮತ್ತು ರಾಗಿ ಇತ್ಯಾದಿ ಯಾವುದೋ ಒಂದು ಇದ್ದೇ ಇರುತ್ತೆ.
ಗೋಧಿ ಮತ್ತು ಅಕ್ಕಿ ಹೆಚ್ಚಾಗಿ ಹುಳಗಳು ಅಥವಾ ಕೀಟಗಳಿಗೆ ಗುರಿಯಾಗುತ್ತವೆ. ಈ ಕೀಟಗಳು ಒಳಗಿನಿಂದ ಧಾನ್ಯಗಳನ್ನು ಟೊಳ್ಳಾಗಿಸಲು ಪ್ರಾರಂಭಿಸುತ್ತವೆ ಮತ್ತು ಅವುಗಳೊಳಗೆ ಕುಳಿತುಕೊಳ್ಳುತ್ತವೆ. ಹೀಗಿರೋವಾಗ ಅಡುಗೆ ಮಾಡೋ ಮೊದಲು ಅವುಗಳನ್ನು ತೆಗೆದು ಹಾಕೋದು ತುಂಬಾನೆ ಮುಖ್ಯ. ಧಾನ್ಯಗಳಲ್ಲಿನ ಕೀಟಗಳಿಂದ ನೀವು ತೊಂದರೆಗೀಡಾಗಿದ್ದರೆ, ಈ ಟಿಪ್ಸ್ ನಿಮ್ಮದಾಗಿಸಿ.
ಬೇ ಲೀಫ್ ಅಥವಾ ಪುಲಾವ್ ಎಲೆ: ಬೇ ಎಲೆ (bay leaf) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಧಾನ್ಯಗಳಲ್ಲಿನ ಕೀಟಗಳನ್ನು ದೂರವಿರಿಸುತ್ತದೆ. ಬೇ ಎಲೆಗಳನ್ನು ಧಾನ್ಯದ ಡಬ್ಬದಲ್ಲಿ ಹಾಕಿ ಇರಿಸಿ. ಬೇ ಎಲೆಯನ್ನು ಇಡುವುದರಿಂದ ಧಾನ್ಯ ಹಾಳಾಗುವುದಿಲ್ಲ ಮತ್ತು ಕೀಟಗಳು ಬೆಳೆಯೋದಿಲ್ಲವಂತೆ.
ಬೇವಿನ ಎಲೆಗಳು: ಬೇವಿನ ಎಲೆಗಳು (neem leaves) ಕೀಟಗಳಿಂದ ಧಾನ್ಯಗಳನ್ನು ರಕ್ಷಿಸುವಲ್ಲಿ ಪರಿಣಾಮ ಬೀರುತ್ತವೆ. ಬೇವಿನ ಎಲೆಗಳ ಔಷಧೀಯ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೀಟಗಳನ್ನು ದೂರವಿರಿಸುತ್ತದೆ. ಆದ್ದರಿಂದ, ಬೇವಿನ ಎಲೆಗಳನ್ನು ಗೋಧಿ, ಅಕ್ಕಿ ಅಥವಾ ಬೇಳೆಕಾಳುಗಳ ಪೆಟ್ಟಿಗೆಗಳಲ್ಲಿ ಇಡಬಹುದು.
ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಜೊತೆಗೆ ಕೀಟಗಳನ್ನು ದೂರವಿರಿಸುವಲ್ಲಿ ಸಹ ಉತ್ತಮ ಪರಿಣಾಮ ತೋರಿಸುತ್ತೆ. ಬೆಳ್ಳುಳ್ಳಿಯನ್ನು (Garlic) ಸಿಪ್ಪೆ ಸುಲಿಯದೆ ಧಾನ್ಯದ ಪೆಟ್ಟಿಗೆಯಲ್ಲಿ ಇರಿಸಿ. ಕೀಟಗಳು ಧಾನ್ಯಗಳಿಂದ ದೂರವಿರುತ್ತವ
ಲವಂಗ: ಇರುವೆಗಳು ಮತ್ತು ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಲವಂಗವನ್ನು ಬಳಸಲಾಗುತ್ತದೆ. ಧಾನ್ಯಗಳಿಂದ ಕೀಟಗಳನ್ನು ದೂರವಿರಿಸಲು ಈ ಲವಂಗವನ್ನು ಇಡಬಹುದು. ಧಾನ್ಯದಲ್ಲಿ ಕೀಟಗಳಿದ್ದರೆ, ಲವಂಗವನ್ನು (clove) ಇಟ್ಟುಕೊಂಡ ನಂತರ ಅವು ಓಡಿಹೋಗುತ್ತವೆ. ಜೊತೆಗೆ ಧಾನ್ಯಗಳಲ್ಲಿ ಕೀಟ ಬೆಳೆಯದೇ ಇರಲು ಸಹ ಇದು ಸಹಾಯ ಮಾಡುತ್ತೆ.