ಬೆಂಗಳೂರು: ಬೆಂಗಳೂರು ಐಟಿ ಸಿಟಿಯಾಗಿ ಮಾರ್ಪಟ್ಟಿದೆ.ಇದರಿಂದ ನಗರದೆಲ್ಲಡೆ ಇಂಗ್ಲಿಷ್ ನಾಮಫಲಕಗಳೇ ರಾಜಾಜಿಸುತ್ತಿದೆ. ರಾಜಧಾನಿಯಲ್ಲಿ ಕನ್ನಡ ನಾಮಫಲಕ ರೂಲ್ಸ್ ಇದ್ರೂ ಉದ್ದಿಮೆಗಳು ಫಾಲೋನೇ ಮಾಡ್ತಿಲ್ಲ.ಇದು ಕನ್ನಡ ಪರ ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಈ ಬಗ್ಗೆ ಕೆರಳಿರೋ ಕರವೇ ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ಉದ್ದಿಮೆಗಳ ವಿರುದ್ದ ಕರವೇ ಕಹಳೆ ಮೊಳಗಿಸಿತ್ತು. ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಸಿ ಇಂಗ್ಲಿಷ್ ಬೋರ್ಡ್ಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕಿದ್ರು, ಹಾಗಾದ್ರೆ ಬೆಂಳೂರಿನಲ್ಲಿ ಕರವೇ ಇಂಗ್ಲಿಷ್ ಬೋರ್ಡ್ ಸಮರ ಹೇಗಿತ್ತು ಬನ್ನಿ ತೋರಿಸ್ತೀವಿ.
ಜಗತ್ತಿನ ಪ್ರಮುಖ ನಗರಗಳ ಪೈಕಿ ಬೆಂಗಳೂರು ಒಂದು. ವಿಶ್ವಮಟ್ಟದಲ್ಲಿ ಬೆಂಗಳೂರು ಹೆಸರು ರಾರಾಜಿಸುತ್ತಿದೆ.ನಗರ ಬೆಳೆದಂತೆ ಕನ್ನಡ ನೆಲದಲ್ಲೇ ಕನ್ನಡವನ್ನ ಕಡೆಗಣಿಸಲಾಗ್ತಿದೆ ಅನ್ನೋ ಆರೋಪ ಇದೆ. ನಗರದಲ್ಲಿ ನಾಮಫಲಕಗಲ್ಲಿ ಶೇ 60 ರಷ್ಟು ಕನ್ನಡ ನಾಮಫಲಕ ಆಳವಡಿಕೆಗೆ ಸರ್ಕಾರ ಸೂಚನೆ ನೀಡಿದ್ರೂ ಉದ್ದಿಮೆಗಳು ನಿರ್ಲಕ್ಷ್ಯ ಮಾಡ್ತಿವೆ.ಈ ಬಗ್ಗೆ ಕೆರಳಿಸಿರೋ ಕನ್ನಡ ಪರ ಸಂಘಟೆಗಳು ಇಂದು ಹೋರಾಟಕ್ಕೆ ಧುಮ್ಮುಕ್ಕಿದ್ದುವು. ಏರ್ಪೋರ್ಟ್ ಸಾದಹಳ್ಳಿ ಟೋಲ್ ಗೇಟ್ ನಿಂದ ಆರಂಭವಾದ ಇಂದಿನ ಹೋರಾಟ, ನಗರದ ವಿವಿಧ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಇಂಗ್ಲಿಷ್ ನಾಮಫಕಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 6ರ ಷ್ಟು ಕನ್ನಡ ನಾಮಫಲಕಗಳ ಅಳವಡಿಕೆಗೆ ಸರ್ಕಾರ ಸೂಚನೆ ಇದೆ. ಆದರೆ ಕನ್ನಡ ನಾಮಫಕಲ ಆಳವಡಿಕೆಗೆ ವಾಣಿಜ್ಯ ಉದ್ದಿಮೆಗಳು ಅಸೆಡ್ಡೆ ತೋರುತ್ತಿದ್ರು . ಕನ್ನ ಡ ನಾಮಫಕಕ ಆಳವಡಿಕೆ ನಿರ್ಲಕ್ಷ್ಮ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವೇಳೆ ಆಂಗ್ಲ ಭಾಷೆಯಲ್ಲಿದ್ದ ನಾಮಫಲಕಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು. ಕೆಲವೆಡೆ ಕಲ್ಲು ತೂರಾಟ, ನಾಮಫಲಕಗಳ ಧ್ವಂಸದಂತಹ ಘಟನೆಗಳು ನಡೆದಿವು.
ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಸಾದಹಳ್ಳಿ ಟೋಲ್ ಗೇಟ್ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವೇಳೆ ವ್ಯಾಪಕ ಆಕ್ರೋಶ ಹಾಗೂ ನಾಮಫಲಕ ಧ್ವಂಸ ಪ್ರಕರಣಗಳು ನಡೆದಿದ್ದರಿಂದ ಪರಿಸ್ಥಿತಿ ಕೈಮೀರಿತ್ತು. ಈ ಹಿನ್ನೆಲೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಕರೆದೊಯ್ದರು. ಈ ಪ್ರತಿಭಟನೆ ಕಬ್ಬನ್ ಪಾರ್ಕ್ವರೆಗೆ ನಡೆಸಬೇಕಾಗಿತ್ತು.ಮೆರವಣಿಯ ಮಾರ್ಗದಲ್ಲಿ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು. .