ವಾಷಿಂಗ್ಟನ್: ಕೆನಡಾ ಪ್ರಧಾನಿ ನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಅಮೆರಿಕ ನಿಯೋಜಿತ ಅಧ್ಯಕ್ಷ ‘ಕೆನಡಾ-ಅಮೆರಿಕ ವಿಲೀನ’ದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾವನ್ನು ಅಮೆರಿಕದೊಂದಿಗೆ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.
2017-2021ರ ಮೊದಲ ಅವಧಿಯಲ್ಲಿ ಟ್ರೂಡೊ ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಬಳಿಕ ನವೆಂಬರ್ 5 ರ ಚುನಾವಣಾ ವಿಜಯದ ನಂತರ ಟ್ರುಡೊ ಅವರನ್ನು ಭೇಟಿಯಾದಾಗಿನಿಂದ ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಆಲೋಚನೆ ಟ್ರಂಪ್ ಅವರಲ್ಲಿತ್ತು. ಈ ಬಗ್ಗೆ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಪೋಸ್ಟ್ ಕೂಡ ಮಾಡುತ್ತಿದ್ದರು. ಇದೀಗ ಅಂತಹುದೇ ಮತ್ತೊಂದು ಟ್ವೀಟ್ ಮಾಡಿದ್ದಾರೆ.
“ಕೆನಡಾದಲ್ಲಿ ಅನೇಕ ಜನರು ಕೆನಡಾವನ್ನು ಅಮೆರಿಕದೊಂದಿಗೆ ವಿಲೀನ ಮಾಡಿ ಅದನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡಲು ಇಷ್ಟಪಡುತ್ತಾರೆ. ಕೆನಡಾ ವಿಲೀನವಾದರೆ ಅದಕ್ಕೆ ಅಗತ್ಯವಿರುವ ಬೃಹತ್ ವ್ಯಾಪಾರ ಕೊರತೆಗಳು ಮತ್ತು ಸಬ್ಸಿಡಿಗಳು ಅಗತ್ಯತೆ ಇನ್ನು ಮುಂದೆ ಬೇಕಾಗುವುದಿಲ್ಲ. ಜಸ್ಟಿನ್ ಟ್ರುಡೊ ಅವರಿಗೂ ಇದು ತಿಳಿದಿತ್ತು. ಇದೀಗ ರಾಜೀನಾಮೆ ನೀಡಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತೆಯೇ, “ಕೆನಡಾವು ಅಮೆರಿಕದೊಂದಿಗೆ ವಿಲೀನಗೊಂಡರೆ, ಯಾವುದೇ ಸುಂಕಗಳು ಇರುವುದಿಲ್ಲ, ತೆರಿಗೆಗಳು ಕಡಿಮೆಯಾಗುತ್ತವೆ ಮತ್ತು ನಿರಂತರವಾಗಿ ಸುತ್ತುವರಿದಿರುವ ರಷ್ಯಾದ ಮತ್ತು ಚೀನೀ ಹಡಗುಗಳ ಬೆದರಿಕೆಯಿಂದ ಅವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.