ಇಂದು ಹೆಚ್ಚಿನವರು ಸ್ಮಾರ್ಟ್ಫೋನ್ ಬಳಕೆ ಮಾಡುತ್ತಾರೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್ ಗಳ ಹಾವಳಿಯೂ ಹೆಚ್ಚಾಗಿದೆ. ಇದೀಗ ಇದಕ್ಕೆಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಇದರನ್ವಯ ಇನ್ಮುಂದೆ ಯಾವುದೇ ಮೊಬೈಲ್ಗಳಿಗೆ ಒಟಿಪಿ ಬರುವುದಿಲ್ಲ.
ಹೌದು, ಟ್ರಾಯ್ ತಂದಿರುವ ಈ ಹೊಸ ನಿಯಮ ಈಗಾಗಲೇ ಜಾರಿಯಲ್ಲಿದೆ. ಈ ಪ್ರಕಾರ ಇನ್ಮುಂದೆ ಯಾವುದೇ ವಹಿವಾಟು ಮಾಡಿದ್ರೂ ಮೊಬೈಲ್ಗಳಿಗೆ ಒಟಿಪಿ ಬರಲ್ಲ.
TRAI ನ ಹೊಸ ನಿಯಮಗಳಿಂದಾಗಿ, ಲಕ್ಷಾಂತರ ಭಾರತೀಯ ಮೊಬೈಲ್ ಬಳಕೆದಾರರು ಮುಂದಿನ ದಿನಗಳಲ್ಲಿ ಒಟಿಪಿ ಸಂಬಂಧಿಸಿ ಸಮಸ್ಯೆ ಎದುರಿಸಬಹುದು ಎಂದು ವರದಿಯಾಗಿದೆ. ಅದರಲ್ಲೂ ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೋದಂತಹ ದೊಡ್ಡ ಟೆಲಿಕಾಂ ಆಪರೇಟರ್ಗಳಿಗೆ TRAI ಈ ನಿಯಮವನ್ನು ಜಾರಿಗೆ ತರಲು ಡಿಸೆಂಬರ್ 1 ಡೆಡ್ಲೈನ್ ನೀಡಲಾಗಿದ್ದು ಹಲವು ಕಂಪೆನಿಗಳು ಫಾಲೋ ಮಾಡುತ್ತಿವೆ.
ಟ್ರಾಯ್ ಜಾರಿಗೆ ತರಲಿರುವ ಈ ನಿಯಮಕ್ಕೆ ಇನ್ನೂ ಏರ್ಟೆಲ್, ಜಿಯೋ, ವಿಐ ಟೆಲಿಕಾಂ ಕಂಪನಿಗಳು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ. ಆದರೆ ಟ್ರಾಯ್ ಇದಕ್ಕೆ ನವೆಂಬರ್ 30 ಲಾಸ್ಟ್ ಎಂದು ಹೇಳಿದೆ. ಒಂದು ವೇಳೆ ಒಪ್ಪಿಗೆ ನೀಡದಿದ್ದರೆ ಡಿಸೆಂಬರ್ ಒಂದರಿಂದ ಮೊಬೈಲ್ ಬಳಕೆದಾರರಿಗೆ ಯಾವುದೇ ರೀತಿಯ ಒಟಿಪಿ ಮೆಸೇಜ್ಗಳು ಬರುವುದಿಲ್ಲ ಎಂದು ಹೇಳಿದೆ.
ನಕಲಿ OTP ಮತ್ತು ಇತರ ಮೋಸದ ಸಂದೇಶಗಳು ಇತ್ತೀಚೆಗೆ ಇದು ಹೆಚ್ಚಾಗಿದೆ. ಇಂತಹ ಮೆಸೇಜ್ಗಳನ್ನು ನಿಲ್ಲಿಸುವುದೇ ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಆದರೆ ಟೆಲಿಕಾಂ ಆಪರೇಟರ್ಗಳು ಇಂತಹ ಮೆಸೇಜ್ಗಳ ಮೂಲವನ್ನು ಪತ್ತೆಹಚ್ಚಿ, ಬ್ಲಾಕ್ ಮಾಡುವ ಅವಕಾಶವನ್ನು ಹೊಂದಿದೆ.
ಟೆಲಿಕಾಂ ಆಪರೇಟರ್ಗಳು ಈ ನಿಯಮಗಳನ್ನು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದರೆ, OTP ಪಡೆಯುವಲ್ಲಿ ತೊಂದರೆ ಉಂಟಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್, ಇ-ಕಾಮರ್ಸ್ ಅಥವಾ ಸೋಷಿಯಲ್ ಮೀಡಿಯಾಗಳಿಂದ ಪಡೆಯುವಂತಹ ಮೆಸೇಜ್ಗಳು ಬರದೇ ಇರಬಹುದು.