ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ರಿಲೀಸ್ ಗೆ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಾಗಿದೆ. ಮುಂಬೈನಲ್ಲಿ ಪುಷ್ಪ 2 ಪ್ರೆಸ್ಮೀಟ್ನಲ್ಲಿ ನಟ ನೀಡಿದ ಹೇಳಿಕೆಯಿಂದ ಇದೀಗ ಅಲ್ಲು ಅರ್ಜುನ್ ಗೆ ಸಂಕಷ್ಟ ಎದುರಾಗಿದೆ.
ಟ್ವಿಟರ್ನಲ್ಲಿ ವೈರಲ್ ಆದ ಒಂದು ಪೋಸ್ಟ್ ಪ್ರಕಾರ ಅಲ್ಲು ಅರ್ಜುನ್ ವಿರುದ್ಧ ಶ್ರೀನಿವಾಸ್ ಗೌಡ್ ಎಂಬುವವರು ಕೇಸ್ ದಾಖಲಿಸಿದ್ದಾರೆ. ಗ್ರೀನ್ ಪೀಸ್ ಅನ್ವಿರೋನ್ಮೆಂಟ್ ಹಾಗೂ ಮಳೆ ಕೊಯ್ಲು ಫೌಂಡೇಷನ್ನ ಅಧ್ಯಕ್ಷರಾಗಿರುವ ಶ್ರೀನಿವಾಸ್ ಗೌಡ್ ಹೈದರಾಬಾದ್ನ ಜವಹರ್ ನಗರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಮುಂಬೈ ಪ್ರೆಸ್ಮೀಟ್ನಲ್ಲಿ ನಟ ಅಲ್ಲು ಅರ್ಜುನ್ ಪುಷ್ಪ 2 ಮೂವಿ ಪ್ರಮೋಟ್ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ನನಗೆ ಫ್ಯಾನ್ಸ್ ಇಲ್ಲ ನನಗೆ ಒಂದು ಆರ್ಮಿ ಇದೆ ಎಂದು ಹೇಳಿದ್ದರು. ನಾನು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ. ಅವರು ನನ್ನ ಕುಟುಂಬದಂತೆ. ಅವರು ನನ್ನ ಜೊತೆ ಇರುತ್ತಾರೆ, ನನ್ನನ್ನು ಸಂಭ್ರಮಿಸುತ್ತಾರೆ. ಅವರು ಒಂದು ಆರ್ಮಿಯಂತೆ ನನಗಾಗಿ ನಿಲ್ಲುತ್ತಾರೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೇನೆ. ಈ ಸಿನಿಮಾ ಏನಾದರೂ ಹಿಟ್ ಆದರೆ ನಾನು ಅದನ್ನು ನನ್ನ ಅಭಿಮಾನಿಗಳಿಗಾಗಿ ಡೆಡಿಕೇಟ್ ಮಾಡುತ್ತೇನೆ ಎಂದಿದ್ದರು.
ಈ ಒಂದು ಹೇಳಿಕೆಯ ಬೆನ್ನಲ್ಲೇ ಶ್ರೀನಿವಾಸ್ ಗೌಡ್ ಎನ್ನುವವರು ಕೇಸ್ ದಾಖಲಿಸಿದ್ದು ಆರ್ಮಿ ಎಂದು ಅಲ್ಲು ಅರ್ಜುನ್ ಬಳಸಿದ್ದು ಅಗೌರವವಾಗಿದೆ. ಯಾಕೆಂದರೆ ಆರ್ಮಿ ಎನ್ನುವ ಪದ ದೇಶ ಸೇವೆ ಮಾಡುವ ಸಶಸ್ತ್ರ ಪಡೆಗಳಿಗೆ ಬಳಸುವಂತದ್ದು ಎಂದಿದ್ದಾರೆ.