ಗದಗ:- ಎಣ್ಣೆ ಹೊಡೆಯುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗದಗ ನಗರದ ಕಳಸಾಪೂರ ರಿಂಗ್ ರೋಡ್ ಬಳಿ ಜರುಗಿದೆ.
ಸಾಕ್ಷ್ಯಾಧಾರಗಳ ಕೊರತೆ: ರಾಗಿಣಿ ವಿರುದ್ಧದ ಡ್ರಗ್ಸ್ ಕೇಸ್ ಖುಲಾಸೆ ಮಾಡಿದ ಹೈಕೋರ್ಟ್!
ಘಟನೆಯಲ್ಲಿ ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಹಾಗೂ ದುರಗಪ್ಪ ಎಂಬ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಎಂಬುವವರು ದುರಗಪ್ಪ ಜೊತೆ ಸ್ನ್ಯಾಕ್ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಮೂವರ ಮೇಲೆ ದುರ್ಗಪ್ಪ ಬೆಂಬಲಿಗರು ಸರಿಸುಮಾರು 40 ಜನ ಸೇರಿ ಮೂವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಕಲ್ಲು ದೊಣ್ಣೆಗಳಿಂದ ಸಿಕ್ಕ ಸಿಕ್ಕಲ್ಲೇ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಹಲವರಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಲೆ, ಕೈ ಮುಖ ಭಾಗಕ್ಕೆ ಗಂಭೀರ ಗಾಯವಾಗಿದೆ.
ತಾಜುದ್ದೀನ್, ಮುಸ್ತಫಾ, ಕಾರ್ತಿಕ್ ಮೂವರು ಕೂತಿದ್ದ ಟೇಬಲ್ ನಲ್ಲಿನ ಸ್ನ್ಯಾಕ್ ಗೆ ದುರ್ಗಪ್ಪ ಕೈ ಹಾಕಿದ್ದ. ಸ್ನ್ಯಾಕ್ ಗೆ ಕೈ ಹಾಕಿದ್ದ ದುರ್ಗಪ್ಪನ ಜೊತೆಗೆ ತಾಜುದ್ದಿನ್ ಟೀಮ್ ಜಗಳವಾಡಿದೆ. ಜಗಳದ ವೇಳೆ ದುರ್ಗಪ್ಪನ ಮೇಲೆ ಬಾಟಲ್ ಗಳಿಂದ ತಾಜುದ್ದೀನ್ ಟೀಮ್ ಹಲ್ಲೆ ಮಾಡಿದ್ದಾರೆ. ಬಳಿಕ ದುರ್ಗಪ್ಪನ ಬೆಂಬಲಿಗರು ಬಂದು ತಾಜುದ್ದೀನ್, ಕಾರ್ತಿಕ, ಮುಸ್ತಫಾ, ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಗದಗ ಶಹರ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದು, ಪರಿಸ್ಥಿತಿ ತಿಳಿಗೊಳಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.