ಹುಬ್ಬಳ್ಳಿ: ರಾಜಕೀಯದಲ್ಲಿ ಮಾತ್ರವಲ್ಲದೆ ಜನಸೇವೆಯಲ್ಲಿಯೂ ಅವಿಸ್ಮರಣೀಯ ಸಾಧನೆಯನ್ನು ಮಾಡಿ, ಎಲ್ಲರ ಮನೆ, ಮನದಲ್ಲಿ ಅಚ್ಚಳಿಯದ ನೆನಪನ್ನು ಬಿಟ್ಟು ಹೋಗಿರುವ ಹೆಮ್ಮೆಯ ನೇತಾರರು, ಸಹಕಾರ ರಂಗದ ಭೀಷ್ಮ, ನಾಡು ಮೆಚ್ಚಿದ ಜನನಾಯಕ ಕೆ.ಎಚ್.ಪಾಟೀಲರು ನಾಡುಕಂಡ ಅಪ್ರತಿಮ ನಾಯಕ. ನೇರ ನುಡಿ, ದಿಟ್ಟ ನಡೆಯಿಂದ ಜನಮಾನಸದಲ್ಲಿ ಹೆಸರು ಮಾಡಿದ ಜನನಾಯಕರ 33ನೇ ಪುಣ್ಯಸ್ಮರಣೆಯನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ.
ಸಚಿವೆ ಹೆಬ್ಬಾಳಕರ್ ವಿಶೇಷ ನೆರವು: ಶಿಂದೋಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಇಂದಿರಾಗಾಜಿನ ಮನೆ ಆವರಣದಲ್ಲಿನ ಕೆ.ಎಚ್.ಪಾಟೀಲರ ಪುತ್ಥಳಿ ಬಳಿ ಸರ್ವಧರ್ಮ ಪ್ರಾರ್ಥನೆ ಏರ್ಪಡಿಸಲಾಗಿದ್ದು, ಶಾಸಕ ಪ್ರಸಾದ್ ಅಬ್ಬಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಶಾಕೀರ್ ಸನದಿ, ಕೆ.ಎಚ್.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದಲ್ಲಿ ಕೆ.ಎಚ್.ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಇದೇ ವೇಳೆ ಪಾಲಿಕೆಯ ವತಿಯಿಂದ ಮೇಯರ್ ರಾಮಣ್ಣ ಬಡಿಗೇರ ಗೌರವ ಸಮರ್ಪಣೆ ಮಾಡಿದರು. ಸರ್ವಧರ್ಮದ ಸಹಭಾಗಿತ್ವದಲ್ಲಿ ವಿನೂತನ ರೀತಿಯಲ್ಲಿ ಇಂತಹದೊಂದು ಕಾರ್ಯಕ್ರಮ ನಡೆದಿರುವ ನಿಜಕ್ಕೂ ವಿಶೇಷವಾಗಿದೆ. ಸಹಕಾರಿ ರಂಗದ ಭೀಷ್ಮ ಕೆ.ಎಚ್.ಪಾಟೀಲರ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ಅಭಿನಂದನೆ ಸಲ್ಲಿಸಿದರು.
ಇನ್ನೂ ಕುಂದಗೋಳ ತಾಲೂಕಿನ ಮುಳ್ಳಹಳ್ಳಿಯ ಶ್ರೀ ಚನ್ನವಿರೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ., ಶಿವಯೋಗಿ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದು, ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಝಹರುದ್ದೀನ ಖಾಜಿ, ಮೈಯರ್ ಮೆಮೋರಿಯಲ್ ಚರ್ಚಿನ ಫಾಸ್ಟರ ರೇವರೆಂಡ್ ರಾಜು ಮೇದಗೊಪ್ಪ ಭಾಗವಹಿಸಿ ದಿ.ಕೆ.ಎಚ್.ಪಾಟೀಲರ ರಾಜಕೀಯ ಹಾಗೂ ಸಾರ್ವಜನಿಕ ಸೇವೆಯನ್ನು ಕೊಂಡಾಡಿದ್ದಾರೆ. ವಿಶ್ವಭಾರತಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಹಾಗೂ ಬುದ್ಧ ರಕ್ಷಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆಯ ಮೂಲಕ ನುಡಿನಮನ ಸಲ್ಲಿಸಿದರು. ಅಲ್ಲದೇ ಇದೇ ವೇಳೆ ಪೂಜ್ಯರು ಗೌರವ ನಮನ ಸಲ್ಲಿಸಿದರು.