ಧಾರವಾಡ: ಮಾಜಿ ಶಾಸಕ ಅಮೃತ ದೇಸಾಯಿ ಅವರು ಕಾರ್ತಿಕ ಮಾಸದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಕ್ಷೇತ್ರ ಉಳವಿಗೆ ಪದಯಾತ್ರೆ ಕೈಗೊಂಡರು. ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಮಠದಿಂದ ಶ್ರೀ ಕ್ಷೇತ್ರ ಉಳವಿಗೆ ಪಾದಯಾತ್ರೆ ನಡೆಲಿದೆ. ಏಳನೇ ಬಾರಿಗೆ ಗರಗ ಮಠದಿಂದ ಅಮೃತ ದೇಸಾಯಿ ಅವರು ಶ್ರೀ ಕ್ಷೇತ್ರ ಉಳವಿಯತ್ತ ಇಂದು ಪದಯಾತ್ರೆ ಆರಂಭಿಸಿದರು.
ಇನ್ನೂ ಪಾದಯಾತ್ರೆ ಆರಂಭಕ್ಕೂ ಮುನ್ನ ಗರಗ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ವಿವಿಧ ಮಠಾಧೀಶರು ಹಾಗೂ ಗರಗ ಮಠದ ಉತ್ತರಾಧಿಕಾರಿ ಪ್ರಶಾಂತ ದೇವರ ನೇತೃತ್ವದಲ್ಲಿ ಅಮೃತ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ದೇಸಾಯಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ವಿವಿಧ ಮಠಾಧೀಶರ ಪಾದಪೂಜೆಯನ್ನು ಅಮೃತ ದೇಸಾಯಿ ಹಾಗೂ ದಂಪತಿ ನೆರವೇರಿಸಿದರು. ಆನಂತರ ಶ್ರೀಮಠದಿಂದ ಪಾದಯಾತ್ರೆಗೆ ಪ್ರಶಾಂತ ದೇವರಾದಿಯಾಗಿ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಮಠದಿಂದ ಆರಂಭಗೊಂಡ ಪಾದಯಾತ್ರೆ ಗರಗ ಗ್ರಾಮದ ವಿವಿಧ ಗಲ್ಲಿಗಳ ಮೂಲಕ ಸಾಗಿ ಮುಂದೆ ಧಾರವಾಡ ರಸ್ತೆ ರಾ ಹೆದ್ದಾರಿ ತಲುಪಿತು. ಪ್ರಶಾಂತ ದೇವರು ಸ್ವತಃ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪ್ರಶಾಂತ ದೇವರು ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ಅವರ ಮೇಲೆ ಗರಗ ಗ್ರಾಮದ ಯುವಕರು ಪುಷ್ಪಮಳೆಗರೆದರು. ನೂರಾರು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಧಾರವಾಡ ಮೂಲಕ ಹಾದು ಮುಂದೆ ನಿಗದಿಗೆ ಈ ಪಾದಯಾತ್ರೆ ತೆರಳಿ ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ.