ಎಡಗೈ ಬ್ಯಾಟರ್ಗಳಾದ ಟ್ರಾವಿಸ್ ಹೆಡ್ ಅಭಿಷೇಕ್ ಶರ್ಮ ಮತ್ತು ಶಾಬಾಜ್ ಅಹ್ಮದ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 67 ರನ್ಗಳಿಂದ ಸೋಲಿಸಿತು.
ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ – ರಾಬಿನ್ ಉತ್ತಪ್ಪ!
ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಪಂತ್ ನಿರ್ಧಾರವನ್ನು ಸನ್ರೈರ್ಸಸ್ ಬ್ಯಾಟರ್ಸ್ ಬುಡಮೇಲು ಮಾಡಿಬಿಟ್ಟರು. ಪವರ್ ಪ್ಲೇನಲ್ಲೇ ಅತೀ ಹೆಚ್ಚು ರನ್ಗಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಸ್ಆರ್ಹೆಚ್. ಕೊನೆಯದಾಗಿ ಎಸ್ಆರ್ಹೆಚ್ 266 ರನ್ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಗ್ ಟಾರ್ಗೆಟ್ ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಡವಿದೆ. 19.1 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 10 ವಿಕೆಟ್ ಕಳೆದುಕೊಂಡು ಸೋಲಪ್ಪಿಕೊಳ್ತು
ಬಿಗ್ ಟಾರ್ಗೆಟ್ ಚೇಸ್ ಮಾಡೋಕೆ ಬಂದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರಂಭಿಕ ಆಘಾತ ಎದುರಾಯ್ತು. ವಾಷಿಂಗ್ಟನ್ ಸುಂದರ್ ಎಸೆದ ಮೊದಲ ಓವರ್ನ ಐದನೇ ಎಸೆತದಲ್ಲಿ ಪೃಥ್ವಿ ಶಾ ವಿಕೆಟ್ ಪತನವಾಯ್ತು. ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಬೌಂಡರಿಸಿ ಪೃಥ್ವಿ ಔಟಾದರು. ಡೆಲ್ಲಿ ತಂಡಸ ಬಿಗ್ ಹಿಟ್ಟರ್ ಡೇವಿಡ್ ವಾರ್ನರ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು ಕೇವಲ ಒಂದು ರನ್ಗಳಿಸಿ ಔಟಾದ್ರು
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ ಮೆಕ್ಗುರ್ಕ್ ಅದ್ಭುತ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಮೆಕ್ಗುರ್ಕ್ 18 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು. ಪೊರೆಲ್ 22 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. ಸ್ಟಬ್ಸ್ ಕೂಡ 10 ರನ್ಗಳಿಸಿ ಔಟಾದ್ರು.