ಯಾದಗಿರಿ : ಕುಡಿದ ನಶೆಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರ ಗ್ರಾಮದಲ್ಲಿ ನಡೆದಿದೆ. ತಾಳಿಕೋಟಿಯಿಂದ ಹುಣಸಗಿ ಮಾರ್ಗವಾಗಿ ಶಹಾಪುರಕ್ಕೆ ಬರುತ್ತಿದ್ದ ಸಾರಿಗೆ ಬಸ್ ಪ್ರಯಾಣಿಕರನ್ನು ಕೆಳಗಿಳಿಸಲು ಮಾಳನೂರ ಗ್ರಾಮದಲ್ಲಿ ನಿಲ್ಲಿಸಿತ್ತು.
ತಪ್ಪು ಮಾಹಿತಿ ದಾಖಲಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ; ಕಲಘಟಗಿ ತಹಶೀಲ್ದಾರ್ ಅಮಾನತು
ಬಸ್ ಸಂಚರಿಸುವಾಗ ಕುಡಿದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ರಾಂಗ್ ಸೈಡ್ ಬಂದಿದ್ದಾನೆ. ಅಲ್ಲದೇ ಬಸ್ ಚಾಲಕ ಹಾಗೂ ಕಂಡಕ್ಟರ್ ಗೆ ಆಶ್ಲೀಲ ಪದಗಳಿಂದ ನಿಂದಿಸಿದ್ದು, ಬಸ್ ಕಂಡಕ್ಟರ್ ಗೆ ಕಪಾಳ ಮೋಕ್ಷ ಮಾಡಿದ್ದಾನೆ. ಮಾಳನೂರು ಗ್ರಾಮದ ಮದನಪ್ಪ ಎಂಬುವವನಿಂದ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಬಸ್ ಚಾಲಕ, ನಿರ್ವಾಹಕ ಹುಣಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಸಂಬಂಧ ಹುಣಸಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.