ತಿರುವನಂತಪುರಂ:- ಕೇರಳದ ಅಲಪುಝಾ ಜಿಲ್ಲೆಯಲ್ಲಿ ಸಾರಿಗೆ ಬಸ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಜರುಗಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಪತ್ನಿಗೆ ತಾಳಿ ಮಾಡಿಸಲು ATMಗೆ ಕನ್ನ ಹಾಕಿದ ಆರೋಪಿ: ಖಾಕಿ ಬಲೆಗೆ ಬಿದ್ದದ್ದು ಹೇಗೆ!?
ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತ ವಿದ್ಯಾರ್ಥಿಗಳು. ಇವರು ಪ್ರಥಮ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕರ್ಲಕೋಡ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಹಾಗೂ ಬಸ್ನಲ್ಲಿದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ.