ಬೆಂಗಳೂರು:- 2025ರ ಜನವರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಶನಿವಾರ ರೀಚ್ -5 (ಹಳದಿ ಮಾರ್ಗದ) ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಪ್ರಗತಿ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಸಿವಿಲ್ ಅಥವಾ ಸಿಸ್ಟಂ ಕಾಮಗಾರಿಗಳು ಗಣನೀಯವಾಗಿ ಪೂರ್ಣಗೊಂಡಿವೆ. ಪ್ರೋಟೋ-ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದ್ದು, ರೈಲ್ವೆ ಮಂಡಳಿಯು ಟ್ರಾಕ್ಷನ್ ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದೆ. ಸಿಗ್ನಲಿಂಗ್ ಸಿಸ್ಟಮ್ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ ಎಂದು ತಿಳಿಸಿದೆ.
ಇನ್ನೂ ನವೆಂಬರ್-ಡಿಸೆಂಬರ್ 2024ರ ವೇಳೆಗೆ 3 ರೈಲು ಸೆಟ್ಗಳು ಲಭ್ಯವಿರಲಿದೆ. ಜನವರಿ 2025ರ ವೇಳೆಗೆ ಈ ಮಾರ್ಗದಲ್ಲಿ 3 ರೈಲುಗಳೊಂದಿಗೆ 30 ನಿಮಿಷಗಳ ಆವರ್ತನದಲ್ಲಿ ಕಾರ್ಯಾರಂಭಿಸುವ ಗುರಿಯನ್ನು ಹೊಂದಿದೆ.
ಡಿಸೆಂಬರ್ 2024ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಮಾರ್ಚ್ 2025 ರಿಂದ ಪ್ರತಿ ತಿಂಗಳು 2 ರೈಲು ಸೆಟ್ಗಳನ್ನ ಟಿಆರ್ಎಸ್ಎಲ್ ಸಂಸ್ಥೆಯಿಂದ ಪಡೆಯಲಾಗುತ್ತದೆ ಹಾಗೂ ಹಂತ ಹಂತವಾಗಿ ಪ್ರಯಾಣದ ಆವರ್ತನವನ್ನು ಕಡಿಮೆ ಗೊಳಿಸಲಾಗುತ್ತದೆ. ಆಗಸ್ಟ್ 2025ರ ಒಳಗೆ ಹಳದಿ ಮಾರ್ಗಕ್ಕೆ ಬೇಕಾಗಿರುವ ಎಲ್ಲಾ 15 ರೈಲುಗಳ ಸೆಟ್ಗಳು ಲಭ್ಯವಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.