ತುಮಕೂರು: ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗೆ ಮಾತ್ರವಲ್ಲ, ಸಣ್ಣ ವಯಸ್ಸಿನವರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ನಿಮ್ಮ ಹೃದಯಕ್ಕೆ ರಕ್ತ ಪೂರೈಕೆಯು ಸ್ಥಗಿತಗೊಳ್ಳುವುದರಿಂದ ಹೃದಯಾಘಾತ ಸಂಭವಿಸುತ್ತದೆ. ಸಾಮಾನ್ಯವಾಗಿ ಇವು ಯಾವುದೇ ಲಕ್ಷಣವಿಲ್ಲದೆ ಸಂಭವಿಸುವ ತುರ್ತುಸ್ಥಿತಿಗಳಾಗಿ ಕಂಡುಬರುತ್ತವೆ.
ಇದೀಗ ಕುಂಭಮೇಳದ ಪ್ರಯುಕ್ತ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾದಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಗೆ ಹೃದಯಾಘಾತವಾಗಿರುವ ಘಟನೆ ನಡೆದಿದೆ. ಶಿರಾ ತಾಲೂಕಿನ ಬರಗೂರು ಮೂಲದ ನಾಗರಾಜ್ (57) ಸಾವನ್ನಪ್ಪಿದ ದುರ್ಧೈವಿಯಾಗಿದ್ದು,
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಎಲ್ಎನ್ಪಿ ಬ್ರಿಕ್ಸ್ನ ಮಾಲೀಕರಾದ ನಾಗರಾಜು ಸ್ನೇಹಿತರೊಂದಿಗೆ ಪ್ರಯಾಗ್ರಾಜ್ಗೆ ತೆರಳಿದ್ದರು. ಮಂಗಳವಾರ ಸಾಯಂಕಾಲ ತ್ರಿವೇಣಿ ಸಂಗಮದಲ್ಲಿ ಸಂಧ್ಯಾ ವಂದನೆ ಮಾಡಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.