ಕಳ್ಳಬಟ್ಟಿ ಕುಡಿದು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ ಆಗಿದೆ
ಅಕ್ಟೋಬರ್ 21 ರಿಂದ ಮತ್ತೆ ಮಳೆ ಆರ್ಭಟ: ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್!
ಈ ದುರಂತದ ಕುರಿತಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಜಿಪಿ ಅಲೋಕ್ ರಾಜ್ ಮತ್ತು ಅಬಕಾರಿ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಸಿಎಂ ನಿತಿಶ್ ಕುಮಾರ್ ಉನ್ನತ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಹೇಳಿದ್ದಾರೆ. ಅದರ ಜೊತೆಗೆ ಕಳ್ಳಬಟ್ಟಿ ಸರಾಯಿ ಪೂರೈಕೆ ಹಿಂದಿರುವ ಕೈಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಡಿಜಿಪಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಈ ಒಂದು ದುರಂತದ ಬಗ್ಗೆ ಸಂಪೂರ್ಣವಾಗಿ ತನಿಖೆ ಕೈಗೊಳ್ಳಲು ಎರಡು ವಿಶೇಷ ತಂಡವನ್ನು ರಚಿಸಲಾಗಿದೆ. ಒಂದು ತಂಡ ಈ ದುರಂತಕ್ಕೆ ಕಾರಣವಾದ ಸ್ಥಳೀಯ ಮಟ್ಟದ ಆರೋಪಿಗಳನ್ನು ಕಂಡು ಹಿಡಿಯಲು ನಿಯೋಜನೆ ಮಾಡಲಾಗಿದೆ. ಮತ್ತೊಂದು ತಂಡವನ್ನು ಮದ್ಯಪಾನ ನಿಷೇಧ ಮಾಡಿದ ಇಲಾಖೆಯಲ್ಲಿ ಸದ್ಯ ನಡೆದಿರುವ ಘಟನೆ ಹಾಗೂ ಈ ಹಿಂದೆ ನಡೆದಿರುವ ಇದೇ ರೀತಿಯ ಘಟನೆಯಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಎಸ್ಐಟಿ ರಚನೆ ಮಾಡಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಜಿಪಿ ಅಲೋಕ್ ರಾಜ್, ಈ ದುರಂತದಲ್ಲಿ ಒಟ್ಟು 25 ಜನರು ಜೀವ ಕಳೆದುಕೊಂಡಿದ್ದಾರೆ,49 ಜನರಿಗೆ ಇನ್ನೂ ಕೂಡ ಚಿಕಿತ್ಸೆ ಮುಂದುವರಿದಿದ್ದು./ ಈಗಾಗಲೇ ಈ ಒಂದು ಪ್ರಕರಣದಲ್ಲಿ 12 ಜನರನ್ನು ಬಂಧಿಸಲಾಗಿದೆ. ಈ ಕಳ್ಳಬಟ್ಟಿ ದುರಂತದಲ್ಲಿ 12 ಜನರ ಪಾತ್ರವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಮೃತರಲ್ಲಿ ಒಟ್ಟು 20 ಜನರು ಸಿವಾನ್ ಜಿಲ್ಲೆಯ ಭಗವಾನ್ಪುರ್, ಮಧರ್ ಹಾಗೂ ಕೌಡಿಯಾ ಪ್ರದೇಶಕ್ಕೆ ಸೇರಿದವರು ಉಳಿದ ಐದು ಜನರು ಸರನ್ ಜಿಲ್ಲೆಗೆ ಸೇರಿದವರು ಎಂದು ಡಿಜಿಪಿ ಹೇಳಿದ್ದಾರೆ.