ಬೆಂಗಳೂರು:- ಅರಮನೆ ಮೈದಾನದಲ್ಲಿ ಇಂದು ಗ್ಲೋಬಲ್ ಇನ್ವೆಸ್ಟರ್ಸ ಮೀಟ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರುಗಳು, ಉದ್ದಿಮೆದಾರರು, ವಿದೇಶಿ ಗಣ್ಯರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಮಾರ್ಪಾಡು ಮಾಡಿದ್ದಾರೆ.
Breaking News: ಕಿಡಿ ಹೊತ್ತಿಸಿದ ಯುವಕನ ಪೋಸ್ಟ್: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ!
ಸಂಚಾರ ಮಾರ್ಪಾಡು
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಗ್ರೌಂಡ್ ಜಂಕ್ಷನ್ – ಕಲ್ಪನ – ಎಂ.ಸಿ.ಸಿ – ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಿರುವವರು, ಸ್ಕೋವರ್ಡ್ ಗೇಟ್ ಮುಖಾಂತರ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬಹುದು.
ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು: ಮೇಕ್ರಿ ಸರ್ಕಲ್ ಅಂಡರ್ ಪಾಸ್ ಮುಖಾಂತರ ಹೋಗಿ ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್ನಲ್ಲಿ ಎಡ ತಿರುವು ಪಡೆದು, ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಸರ್ವಿಸ್ ರಸ್ತೆಯಲ್ಲಿ ಎಡತಿರುವು ಪಡೆದು. ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಯಶವಂತಪುರ ಕಡೆಯಿಂದ ಬರುವ ವಾಹನಗಳು: ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತ್ತಿರುವು ಪಡೆದು -ಸರ್ವಿಸ್ ರಸ್ತೆಯಲ್ಲಿ ಸಾಗಿ, ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್ನಲ್ಲಿ ಎಡತಿರುವು ಪಡೆದು ಚಕ್ರವರ್ತಿ ಲೇಔಟ್ ಎಡತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯನಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.