ಬೆಂಗಳೂರು: ನಗರದಲ್ಲಿ ಆಟೋ ಚಾಲಕರಿಂದ ನಿಯಮ ಉಲ್ಲಂಘನೆ ಹಿನ್ನೆಲೆ, ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ನಡೆಸಲಾಗಿದೆ.
ದಕ್ಷಿಣ ವಿಭಾಗದ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ನಿಯಮ ಉಲ್ಲಂಘನೆ ಮಾಡಿರೋ ಆಟೋ ಚಾಲಕರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ.
ಕಳೆದ ಮೂರು ದಿನದಿಂದ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಜ.29ರಂದು ಶಾಲಾ-ಕಾಲೇಜು ಸುತ್ತಮುತ್ತ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಗರದ ವಿವಿಧ ಕಡೆಗಳಿಂದ ಒಟ್ಟು 2 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ.
ಜ.29ರಂದು ವಸೂಲಿಯಾದ ದಂಡ
- ಹೆಲ್ಮೆಟ್ ರಹಿತ ಸವಾರಿಯ 132 ಪ್ರಕರಣ ಸಂಬಂಧ 64,800 ರೂ ದಂಡ ವಸೂಲಿಯಾಗಿದೆ.
- ಟ್ರಿಪೆಲ್ ರೈಡಿಂಗ್ ನ 375 ಪ್ರಕರಣ ಸಂಬಂಧ 1,84,100 ರೂ ದಂಡ.
- ನೋ ಎಂಟ್ರಿ ಉಲ್ಲಂಘನೆಯ 27 ಪ್ರಕರಣ ಸಂಬಂಧ 13,500 ರೂ ದಂಡ.
- ಫುಟ್ ಪಾತ್ ನಲ್ಲಿ ಸವಾರಿ ಸಂಬಂಧ 1,466 ಪ್ರಕರಣ ದಾಖಲಿಸಿ 7,22,600 ರೂ ದಂಡ ವಸೂಲಿ ಮಾಡಲಾಗಿದೆ.