ಬೆಂಗಳೂರು:– ನಗರದಲ್ಲಿ ಸಂಚಾರಿ ನಿಯಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಶಾಲಾ ಮಕ್ಕಳಿಗೆ Traffic park ವೀಕ್ಷಣೆ ಮೂಲಕ ಸಾರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದೆ.
ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಯಾವ ಸ್ಥಾನ? ಈ ಕುರಿತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಬೆಂಗಳೂರು ನಗರ ಇವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ. ಸಂಚಾರಿ ಪೋಲಿಸರ ದಂಡದ ಮೊತ್ತದ ರಿಯಾಯಿತಿ, ವಿವರಗಳು ಸುತ್ತೋಲೆಯ ವಿವರ ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ
ಟ್ರಾಫಿಕ್ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ ಬಳಸಲಿರುವ ಬೆಂಗಳೂರು ಪೊಲೀಸರು ರಸ್ತೆ ಅಪಘಾತಗಳು ನಡೆಯದಂತೆ ತಡೆಯುವ ಪ್ರಯತ್ನವನ್ನು ಸಂಚಾರ ವಿಭಾಗವು ಮಾಡುತ್ತಿದ್ದು, ವಿವಿಧ ಶಾಲೆಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿ ಸಿಬ್ಬಂದಿಯವರು Student Association for Road Safety ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳುವುದರ ಜೊತೆಗೆ Safe Root to School ಯೋಜನೆಯಡಿಯಲ್ಲಿ ಶಾಲೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಅಭ್ಯಾಸ ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ Traffic Police Park ಅನ್ನು ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, ‘ಮೊಳಕೆಯಲ್ಲಿಯೇ ತಿದ್ದಿರಿ’ ಎಂಬುದು ಈ ಪಾರ್ಕ್ನ ಧ್ಯೇಯ ವಾಕ್ಯವಾಗಿದೆ. ನೂರಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಪಾದಚಾರಿ ಮಾರ್ಗದ ಬಗ್ಗೆ ತಿಳುವಳಿಕೆ, ರಸ್ತೆ ಅಪಘಾತವನ್ನು ತಪ್ಪಿಸಿ ಜೀವವನ್ನು ಉಳಿಸುವ ಸಂಚಾರಿ ನಿಯಮಗಳ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸು