ಬೆಂಗಳೂರು:- ಬೆಂಗಳೂರಿನ ಅರಮನೆ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ 2 ದಿನ ನಿಯಂತ್ರಣ ಮಾಡಲಾಗಿದ್ದು, ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.
ಉಲ್ಲಾಳದಲ್ಲಿ ನಡೆದ ದರೋಡೆ ಪ್ರಕರಣ: ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ!
ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ರಂದು ಎರಡು ದಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವತಿಯಿಂದ “ಬ್ರಾಹ್ಮಣ ಮಹಾ ಸಮ್ಮೇಳನ” ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇತರೆ ಸಚಿವರುಗಳು, ಗಣ್ಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 10 ಸಾವಿರದಿಂದ ರಿಂದ 15 ಸಾವಿರ ಜನರು ಆಗಮಿಸಲಿದ್ದಾರೆ. ಸಂಚಾರಿ ಪೊಲೀಸರು ಅರಮನೆ ಮೈದಾನ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡಿದ್ದಾರೆ.
ಪರ್ಯಾಯ ಮಾರ್ಗ:-
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಕರ್ಮ್ಯಾನರ್ ಜಂಕ್ಷನ್-ಬಿ.ಡಿ.ಎ ಅಪ್ರ್ಯಾಂವ್-ರಮಣಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ಬಸ್ ನಿಲ್ದಾಣ-ಕಾವೇರಿ ಜಂಕ್ಷನ್ ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಲ ಯೂತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ವಾಪಾಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ, ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-01 ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಸ್ಥಳ ತಲುಪಬಹುದು.
ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣ-ವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ, ಹೊರಬಂದು ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಗೆ ಹೋಗಬಹುದಾಗಿದೆ.