ಹಾವೇರಿ:- ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 48ರಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬ್ಯಾರಲ್ನಲ್ಲಿ ತುಂಬಿದ್ದ ಕ್ರೂಡ್ ಆಯಿಲ್ ರಸ್ತೆಯಲ್ಲಿ ನೀರಿನಂತೆ ಹರಿದು ಹೋದ ಘಟನೆ ನಡೆದಿದೆ.
Rain News: ಇಂದಿನಿಂದ 4 ದಿನ ಈ ರಾಜ್ಯಗಳಿಗೆ ಚಳಿ, ಮಳೆ ಎಚ್ಚರಿಕೆ! ಎಲ್ಲೆಲ್ಲಿ?
ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ಗೆ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಗಿಡಗಳಿಗೆ ನೀರು ಹಾಯಿಸುವ ಟ್ರ್ಯಾಕ್ಟರ್ಗೆ ಲಾರಿ ಗುದ್ದಿದೆ. ಈ ವೇಳೆ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಗೆ ಲಾರಿ ಚಾಲಕನನ್ನು ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.