ಹುಬ್ಬಳ್ಳಿ : ಡಿ. 8 ರಂದು ಜಪಾನ್ ನ ಟೊಯೋಟಾ ಮೋಟಾರ್ ಕಾರ್ಪೊರೇಷನ್ ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ಗ್ಲೋಬಲ್ ಟೊಯೊಟಾ ಎಕಿಡೆನ್ ರಿಲೇ ರೇಸ್ 2024 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಜ್ಜಾಗಿದೆ.
ಎಸ್ ಎಸ್ ಕೆ ಸಮಾಜದ ಮುಖಂಡರಲ್ಲಿ ಜಾಗೃತಿ ಯಾವಾಗ ಬರುತ್ತದೆ- ರಾಜು ಅನಂತ ಸಾ ನಾಯಕವಾಡಿ ಪ್ರಶ್ನೆ
ಈ ಕುರಿತು ಕಂಪನಿ ಮಾಹಿತಿ ನೀಡಿದ್ದು, ಇದೇ ಮೊದಲ ಬಾರಿಗೆ 10 ಮಹಿಳಾ ಉದ್ಯೋಗಿಗಲು ಸೇರಿದಂತೆ ಒಟ್ಟು 20 ಮಂದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಟಿಕೆಎಂ ತಂಡದಲ್ಲಿ ಅರ್ಧ ಮಂದಿ ಮಹಿಳೆಯರಿರುವುದು ಸಂಸ್ಥೆಯು ಲಿಂಗ ಸಮಾನತೆ ಕುರಿತು ಹೊಂದಿರುವ ಬದ್ಧತೆಗೆ ಪುರಾವೆಯಾಗಿದೆ.
ಟೊಯೋಟಾದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಏಕತೆ, ದೃಢತೆ ಮತ್ತು ಸಹಯೋಗದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಜಪಾನ್ ನಲ್ಲಿ ಎಕಿಡೆನ್ ರಿಲೇ ರೇಸ್ ಆರಂಭಗೊಂಡಿತು. ಟಿಕೆಎಂ 2005ರಿಂದಲೂ ತಮ್ಮ ಉದ್ಯೋಗಿಗಳಿಗೆ ಆರೋಗ್ಯ ಮತ್ತು ಟೀಮ್ ವರ್ಕ್ ಕಡೆಗೆ ಆದ್ಯತೆ ನೀಡಲು ಪ್ರೋತ್ಸಾಹಿಸಲು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ.
ಜಪಾನ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಮಹಿಳಾ ತಂಡದಲ್ಲಿ ಲಾವಣ್ಯ ಡಿ.ಎನ್., ಎಂ.ಶೆಂದೂರೆ ಮಾಧವಿ, ರಂಜಿತಾ ಕೆ., ಬಿ.ಎಲ್. ಚೈತ್ರಾ, ಸರಿತಾ, ಕವನ ಎನ್.ಆರ್., ದೀಪಿಕಾ ಕೆ., ಸೌಮ್ಯಾ ಜಮ್ಮಿಹಾಲ್, ಐಶ್ವರ್ಯ ಡಿ.ಜೆ., ಮತ್ತು ಮೇಘನಾ ಎಸ್. ಆಚಾರ್ಯ ಇದ್ದಾರೆ. ಪುರುಷರ ತಂಡದಲ್ಲಿ ಗಗನ್ ಬಿ.ಆರ್., ರಮೇಶ್ ಹಣಮಂತ್ ಸಿಂಗಾಡಿ, ಕೆ.ಶರಣಪ್ಪ, ಕಿಶೋರ್ ಎಂ.ಕೆ., ಎಂ.ವೈ. ಸಂದೀಪ್ ಕುಮಾರ್, ಎಂ.ಉದಯ್ ಕುಮಾರ್, ಸಿದ್ದಾರ್ಥ ಎಂ.ಎಸ್., ಮಧು ಕೆ.ಎಂ., ಸಿದ್ದರಾಜು ಸಿ., ಮತ್ತು ದರ್ಶನ್ ಎ ಇರುತ್ತಾರೆ ಎಂದು ತಿಳಿಸಿದ್ದಾರೆ.