ಹುಬ್ಬಳ್ಳಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕರ್ನಾಟಕದ ರೋಮಾಂಚಕ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಸಾರುವ “ವೈವಿಧ್ಯತೆ” ಎಂಬ ವಿಷಯದ ಮೇಲೆ ‘ನಮ್ಮ ಕನ್ನಡಹಬ್ಬ 2024’ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ.ಗ್ಲೋಬಲ್ ಟೊಯೊಟಾ ಎಕಿಡೆನ್ ಮ್ಯಾರಥಾನ್ 2024 ರಲ್ಲಿ ಭಾಗವಹಿಸಲು ಟಿಕೆಎಂ ನ ವಿಶೇಷ ಮಹಿಳಾ ತಂಡವನ್ನು ಘೋಷಿಸಿದೆ. ಇದು ಸಮಾನ ಅವಕಾಶಗಳನ್ನು ಬೆಳೆಸುವ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಟಿಕೆಎಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮತ್ತು ಜಪಾನ್ನ ಟೊಯೊಟಾ ಮೋಟಾರ್ ಕಾರ್ಪೋರೇಷನ್ನ ಭಾರತ, ಮಧ್ಯಪ್ರಾಚ್ಯ, ಪೂರ್ವಏಷ್ಯಾ ಮತ್ತು ಓಷಿಯಾನಿಯಾದ ಪ್ರಾದೇಶಿಕ ಸಿಇಒ ಶ್ರೀಮಸಕಾಜುಯೋಶಿಮುರಾ ಅವರು ವಿಶೇಷ ಚೇತನ ವ್ಯಕ್ತಿಗಳನ್ನು ಕ್ರಮೇಣ ಕಾರ್ಯಪಡೆಗೆ ಸಂಯೋಜಿಸುವ ಯೋಜನೆಗಳನ್ನು ಘೋಷಿಸಿದರು.ಇನ್ನು ಕನ್ನಡ ಚಲನ ಚಿತ್ರೋದ್ಯಮಕ್ಕೆ ನೀಡಿದ ಪ್ರಭಾವಶಾಲಿ ಕೊಡುಗೆಗಳಿಗಾಗಿ ಪ್ರಸಿದ್ಧರಾದ ಕನ್ನಡದ ಹೆಸರಾಂತ ನಟ ಶ್ರೀಮುರಳಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಸ್ಥಳೀಯ ಸಮುದಾಯದ ಸದಸ್ಯರನ್ನು ಗುರುತಿಸಲು ಮತ್ತು ಪ್ರೇರೇಪಿಸಲು “ಟೊಯೋಟಾ ಚೈತನ್ಯ ಪುರಸ್ಕಾರ” ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಕನ್ನಡ ಹಬ್ಬದಲ್ಲಿ ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳ 9 ಗಣ್ಯರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಟೊಯೊಟಾ ಕಿರ್ಲೋಸ್ಕರ್ ರ್ಮೋಟಾರ್ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಅವರು ಮಾತನಾಡಿ, “ನಮ್ಮ ಕನ್ನಡ ಹಬ್ಬವು ಒಂದು ಆಚರಣೆಗಿಂತಲೂ ಮಿಗಿಲಾದುದು. ಇದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವ ಅಚಲ ಬದ್ಧತೆಯ ಪ್ರತಿಬಿಂಬವಾಗಿದೆ,
ಇದು ವರ್ಷಗಳಿಂದ ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿದೆ. ಟೊಯೋಟಾ ಚೇತನ ಪುರಸ್ಕಾರದ ಮೂಲಕ ಸ್ಥಳೀಯ ನಾಯಕರನ್ನು ಗೌರವಿಸುವ ಮೂಲಕ ಮತ್ತು ಸ್ಥಳೀಯ ಸಂಸ್ಕೃತಿ, ಜಾನಪದಪ್ರಕಾರಗಳು, ಮಹಿಳಾ ಉದ್ಯಮಿಗಳು, ಕುಶಲ ಕರ್ಮಿಗಳು ಮತ್ತು ಪ್ರದರ್ಶಕರ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ, ಕರ್ನಾಟಕದ ಮೌಲ್ಯಗಳೊಂದಿಗೆ ಅನುರಣಿಸುವ ಅರ್ಥಪೂರ್ಣ ಮತ್ತು ಶಾಶ್ವತ ಪ್ರಭಾವವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆಎಂದರು.