ಹುಬ್ಬಳ್ಳಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. “ಸೆಡಾನ್ ಟು ದಿ ಕೋರ್” ಎಂಬ ಪರಿಕಲ್ಪನೆಯ ಆಧಾರದಲ್ಲಿ ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸೆಡಾನ್ ಅನ್ನು ವಿನ್ಯಾಸಗೊಳಿಸಲಾಗಿದೆ.ಇಂಗಾಲ ತಟಸ್ಥ ಗುರಿಗಳನ್ನು ಸಾಧಿಸುವ ಉದ್ದೇಶಕ್ಕೆ ಪೂರಕವಾಟಿ ಟೊಯೋಟಾ ಸಂಸ್ಥೆಯು ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.
ಅತ್ಯಾಧುನಿಕ 5ನೇ ಜನರೇಷನ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು ಅತ್ಯುತ್ತಮ ಕಾರ್ಯಕ್ಷಮತೆ, ಆಕರ್ಷಕ ಶೈಲಿ, ಉನ್ನತ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನದಂತೆ ಮೂಡಿ ಬಂದಿದೆ. ಅತ್ಯಾಕರ್ಷಕ ಎಕ್ಸ್ ಟೀರಿಯರ್ ಗಳು, ಅದ್ಭುತ ತಂತ್ರಜ್ಞಾನ ಹೊಂದಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಗ್ರಾಹಕರ ವಿಶಿಷ್ಟ ಆಸೆಗಳಿಗೆ ತಕ್ಕಂತೆ ರೂಪುಗೊಂಡಿದ್ದು, ವಿಶೇಷ ಸ್ಟೈಲ್ ಮತ್ತು ಶೈಲಿಯನ್ನು ಹೊಂದಿದೆ.
Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?
ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಕಾಜು ಯೋಶಿಮುರಾ ಅವರು, “ಟೊಯೋಟಾದ ಜಾಗತಿಕ ಪರಿಸರ ಸವಾಲು 2050ಕ್ಕೆ ಅನುಗುಣವಾಗಿ ಅತ್ಯುತ್ತಮವಾದ, ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಅಭಿವೃದ್ಧಿ ದೃಷ್ಟಿಕೋನಕ್ಕೆ ಈಗ ಬಿಡುಗಡೆಯಾಗಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಉತ್ತಮ ಪುರಾವೆಯಾಗಿದೆ ಎಂದು ಹೇಳಿದರು.