ನವದೆಹಲಿ: ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು ವಾಯು ಮಾಲಿನ್ಯದ ಜೊತೆಗೆ ಜಲ ಮಾಲಿನ್ಯವೂ ಅಧಿಕವಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕ AQI 300ರ ಗಡಿ ದಾಟಿದರೆ ಮತ್ತೊಂದು ಕಡೆ ಯಮುನಾ ನದಿಯಲ್ಲಿ ಭಾರಿ ಪ್ರಮಾಣದ ನೊರೆ ಉತ್ಪತಿಯಾಗಿದೆ. ಛತ್ ಪೂಜೆಗೂ ಮುನ್ನವೇ ಓಖಲಾ ಬ್ಯಾರೇಜ್ ಬಳಿ ಯಮುನಾ ನದಿ ನೀರು ದುಸ್ತರವಾಗಿದೆ.
ಯಮುನಾ ನದಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಕಾರಣ ವಿಷಪೂರಿತ ನೊರೆ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಹಿಂದಿನ ವರ್ಷಗಳಿಗಿಂತ ಹೆಚ್ಚು ಪ್ರಮಾಣದ ಮಾಲಿನ್ಯ ಈ ಬಾರಿ ಕಂಡು ಬರುತ್ತಿದೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ಇನ್ನು ದೆಹಲಿಯ ನಗರದಲ್ಲಿ ದೀಪಾವಳಿಗೂ ಮುನ್ನ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ದೆಹಲಿಯ ಪ್ರಮುಖ ಪ್ರದೇಶದಲ್ಲಿ AQI 300 ದಾಟಿದೆ. ಇಂಡಿಯಾ ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೆಳಗ್ಗೆ ಉಸಿರುಗಟ್ಟುವ ವಾತಾವರಣ ನಿರ್ಮಿಸಿತ್ತು. ದೆಹಲಿ ಹೊರ ಭಾಗದಲ್ಲಿ ಗೌತಮ್ ಬುಧ್ ನಗರವು 11.4%, ಬುಲಂದ್ಶಹರ್ 7.8%, ಗಾಜಿಯಾಬಾದ್ 6.6% ಮತ್ತು ಫರಿದಾಬಾದ್ 4.8% ಮಾಲಿನ್ಯಕ್ಕೆ ಕೊಡುಗೆ ನೀಡಿವೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಮುನಾ ನದಿಯ ನೀರು ವಿಷಪೂರಿತವಾಗಿದೆ. ಅರವಿಂದ್ ಕೇಜ್ರಿವಾಲ್ ಅವರು 2025ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದರು. ಈವರೆಗೂ ಏನು ಮಾಡಿದ್ದಾರೆ? ಎಂದು ಹರಿಹಾಯ್ದರು.