ವಿಜಯನಗರ:ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದೆ. ಒಂದೆಡೆ ರಾಜ್ಯದಾದ್ಯಂತ ಸುರಿಯುತ್ತಿರುವ ಭೀಕರ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿ ಆಗಿ, ಎಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ತುಂಬಿ ತುಳುಕುತ್ತಿರುವ ಜಲಾಶಯಗಳಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ.
ಹೌದು, ಭಾರೀ ಮಳೆಯಿಂದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ ಆಗಿದ್ದು, ನೀರನ್ನು ವೀಕ್ಷಿಸಲು ಪ್ರವಾಸಿಗರು ತಂಡೋಪತಂಡವಾಗಿ ಹೋಗುತ್ತಿದ್ದಾರೆ. ಈ ವೇಳೆ ಜಲಾಶಯದ ಹಿನ್ನೀರಿನಲ್ಲಿ ಯುವಕ ಯುವತಿಯರು ಹುಚ್ಚಾಟ ಮೆರೆದಿದ್ದಾರೆ. ಇನ್ನೊಂದೆಡೆ ಪೋಷಕರು ಮಕ್ಕಳೊಂದಿಗೆ ನೀರಲ್ಲಿ ಹುಚ್ಚಾಟ ಮೆರೆದ ದೃಶ್ಯವೂ ಸೆರೆಯಾಗಿದೆ. ಮೊದಲೇ ಜಲಾಶಯದಲ್ಲಿ ಬೃಹತ್ಕಾರದ ಮೊಸಳೆಗಳಿವೆ ಎಂಬ ಮಾಹಿತಿ ಇದೆ.
ನಿಮ್ಮ ಕಿಚನ್ ಯಾವಾಗಲೂ ಕ್ಲೀನ್ ಆಗಿರ್ಬೇಕಂದ್ರೆ ಈ ʼʼಅಡುಗೆ ಸೋಡಾʼʼ ಟಿಪ್ಸ್ ಫಾಲೋ ಮಾಡಿ!
ಅಷ್ಟೇ ಅಲ್ಲ ನದಿಯಲ್ಲಿ ಕಾಣಿಸಿಕೊಂಡ ಉದಾಹರಣೆಗಳಿವೆ. ಜಲಾಶಯ ಭರ್ತಿ ಹಿನ್ನಲೆ ಮೊಸಳೆ ದಡದಲ್ಲಿರುತ್ತವೆ. ಇಂತಹ ಸಮಯದಲ್ಲಿ ಮನುಷ್ಯರಿಗೆ ಅನಾಹುತವಾದ್ರೆ ಯಾರು ಹೊಣೆ. ಹೀಗಾಗಿ ತುಂಗಭದ್ರಾ ಆಡಳಿತ ಮಂಡಳಿ ನದಿಗೆ ಇಳಿಯದಂತೆ ಆದಷ್ಟು ಎಚ್ಚರಿಕೆ ವಹಿಸಬೇಕು. ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದು, ಕೂಡಲೇ ಪೊಲೀಸರನ್ನ ನಿಯೋಜಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.