ಬಾಲಿವುಡ್ ಚಿತ್ರರಂಗವನ್ನು ಆಳಿದವರಲ್ಲಿ ಕಪೂರ್ ಕುಟುಂಬ ಕೂಡ ಒಂದು. ಇಂದು ಕೂಡ ಕಪೂರ್ ಕುಟುಂಬದ ಸಾಕಷ್ಟು ಕುಟುಂಬದವರು ಹಿಂದಿ ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದಾರೆ. ಈ ಕುಟುಂಬದಲ್ಲಿ ಹಲವು ಸ್ಟಾರ್ ನಟ, ನಟಿಯರಿದ್ದಾರೆ. ಇವರ ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಬಗ್ಗೆಯೂ ಆಗಾಗ್ಗೆ ಸದ್ದು, ಸುದ್ದಿಗಳು ಆಗುತ್ತಿರುತ್ತವೆ. ಇದೇ ಕುಟುಂಬಕ್ಕೆ ಸೇರಿದ, 90-2000 ಸಮಯದಲ್ಲಿ ಬಾಲಿವುಡ್ ಅನ್ನು ಆಳಿದ ಕರಿಷ್ಮಾ ಕಪೂರ್ ಚಿತ್ರರಂಗದಿಂದ ಬಹುತೇಕ ದೂರಾಗಿದ್ದರು, ಇದೀಗ ಬಾಲಿವುಡ್ಗೆ ಮರಳಿದ್ದಾರೆ.
ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕರಿಷ್ಮಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಸರಿದರು. ನಟಿಯಾಗಿದ್ದಂಗ ಚಿನ್ನದಂಥಹಾ ದಿನಗಳನ್ನು ನೋಡಿದ್ದ ನಟಿಮದುವೆಯಾದ ಬಳಿಕ ನರಕವನ್ನೇ ನೋಡಿದ್ದರು. ತಮ್ಮ ದಾಂಪತ್ಯದ ಬಗ್ಗೆ ಕರಿಷ್ಮಾ ಹಿಂದೊಮ್ಮೆ ಮಾತನಾಡಿದ್ದರು. ಅದೀಗ ಮತ್ತೆ ಸುದ್ದಿಯಾಗಿದೆ.
ಕರೀಷ್ಮಾ ಕಪೂರ್, ಸಂಜಯ್ ಕಪೂರ್ ಎಂಬುವರನ್ನು 2003 ರಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಿಗೆ ಸಂಜಯ್ನ ನಿಜವಾದ ವ್ಯಕ್ತಿತ್ವದ ಪರಿಚಯವಾಗಿದೆ. ಪತ್ನಿಗೆ ಪತಿ ಸಂಜಯ್ ಕಪೂರ್ ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ ಪೀಡಿಸುತ್ತಿದ್ದರಂತೆ. ಕರೀನಾರನ್ನು ತನ್ನ ಗೆಳೆಯರಿಗೆ ಹರಾಜು ಹಾಕಿದ್ದರಂತೆ ಸಂಜಯ್ ಕಪೂರ್. ಕರಿಷ್ಮಾ ವಿರೋಧಿಸಿದಾಗ ಅವರ ಮೇಲೆ ಹಲ್ಲೆ ಸಹ ಮಾಡುತ್ತಿದ್ದರಂತೆ.
ಕರೀಷ್ಮಾ ಕಪೂರ್, ಗರ್ಭಿಣಿ ಆಗಿದ್ದಾಗ ಅವರ ಅತ್ತೆ, ಕರಿಷ್ಮಾಗೆ ಬಟ್ಟೆಯೊಂದನ್ನು ನೀಡಿದ್ದರಂತೆ. ಆದರೆ ಆ ಬಟ್ಟೆ ಚಿಕ್ಕದಾದ ಕಾರಣ ಧರಿಸಲು ಆಗಿರಲಿಲ್ಲವಂತೆ, ಅದಕ್ಕೆ ಜಗಳ ಮಾಡಿದ್ದ ಸಂಜಯ್, ತಾಯಿಯ ಮೂಲಕ ಕರಿಷ್ಮಾಗೆ ಹೊಡೆಸಿದ್ದರಂತೆ. ಈ ಬಗ್ಗೆ ತಾವು ಮುಂಬೈ ಪೊಲೀಸರಿಗೆ ದೂರು ಸಹ ನೀಡಿದ್ದಾಗಿ ಕರಿಷ್ಮಾ ಕಪೂರ್ ಹೇಳಿಕೊಂಡಿದ್ದಾರೆ. ಕರಿಷ್ಮಾ, ತಮ್ಮ ವಿಚ್ಛೇಧನ ಅರ್ಜಿಯಲ್ಲಿಯೂ ಸಹ ಈ ಎಲ್ಲ ಅಂಶಗಳನ್ನು ನಮೂದಿಸಿದ್ದಾರೆ. ಕರಿಷ್ಮಾರಿಂದ ದೂರು ಸ್ವೀಕರಿಸಿದ್ದ ಪೊಲೀಸ್ ಅಧಿಕಾರಿಯೂ ಸಹ ನ್ಯಾಯಾಲಯದಲ್ಲಿ ಸಂಜಯ್ ವಿರುದ್ಧ ಹೇಳಿಕೆ ದಾಖಲಿಸಿದ್ದರು.
ಕರೀನಾ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿದ್ದರು. ಇಬ್ಬರಿಗೂ ನಿಶ್ಚಿತಾರ್ಥ ಸಹ ನಡೆದಿತ್ತು. ಆದರೆ ಆ ಬಳಿಕ ನಿಶ್ಚಿತಾರ್ಥ ಮುರಿದು ಬಿತ್ತು. ಬಳಿಕ 2003 ರಲ್ಲಿ ಕರಿಷ್ಮಾ, ಸಂಜಯ್ ಜೊತೆ ವಿವಾಹವಾದರು. 2014ರಲ್ಲಿ ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರಿಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ವಿಚ್ಛೇದನದ ಬಳಿಕ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಕರಿಷ್ಮಾ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಾ ರಿಯಾಲಿಟಿ ಶೋನಲ್ಲೂ ತೊಡಗಿಕೊಂಡಿದ್ದಾರೆ.