ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರಿಗಾಗಿ ಕೇಂದ್ರ ಸರ್ಕಾರ ಪರಿಚಯು ಪ್ರಮುಖ 10 ಯೋಜನೆಗಳು ಇಲ್ಲಿವೆ.
ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟವು eNAM ಅನ್ನು ಅನುಷ್ಠಾನಗೊಳಿಸುವ ಪ್ರಮುಖ ಪಾತ್ರ ವಹಿಸುತ್ತದೆ.ಇದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೃಷಿ ಮಾರಾಟದಲ್ಲಿ ಏಕರೂಪತೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
ಭಾರತದ ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು
ಉದ್ದೇಶದಿಂದ ಭಾರತ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ.
ಇದರ ಘೋಷಾವಾಕ್ಯವು ಪ್ರತಿ ಜಮೀನಿಗೂ ನೀರು.
ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY)
ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಪರಂಪರಾಗತ್ ಕೃಷಿ ವಿಕಾಸ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ ಪ್ರಾರಂಭಿಸಿತು.
ಈ ಯೋಜನೆಯು ರೈತರು ದೊಡ್ಡ ಪ್ರದೇಶಗಳಲ್ಲಿ ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಇದರ ಲಾಭವನ್ನು ಪಡೆಯಲು ಪ್ರತಿ ಕ್ಲಸ್ಟರ್ ಅಥವಾ ಗುಂಪು ಪರಂಪರಾಗತ್ ಕೃಷಿ ವಿಕಾಸ ಯೋಜನೆ
ಅಡಿಯಲ್ಲಿ ಸಾವಯವ ಕೃಷಿಯನ್ನು ತೆಗೆದುಕೊಳ್ಳಲು ಸಿದ್ಧರಿರುವ 50 ರೈತ ಸದಸ್ಯರನ್ನು ಒಳಗೊಂಡಿರಬೇಕು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)
ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯು ಸರ್ಕಾರ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಾಗಿದ್ದು,
ಒಂದೇ ವೇದಿಕೆಯಲ್ಲಿ ಹಲವು ಉಪಯೋಗಗಳನ್ನು ಒದಗಿಸುತ್ತದೆ.
ಈ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಬೆಳೆಗಳನ್ನು ನೈಸರ್ಗಿಕ ವಿಕೋಪಗಳು, ಕೀಟಗಳು ಅಥವಾ ರೋಗ ಬಾಧೆಯಿಂದ ಹಾನಿಯಾದರೆ,
ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತದೆ. ಅಲ್ಲದೇ ಕೃಷಿಯಲ್ಲಿ ರೈತರು ನಿರಂತರವಾಗಿ
ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ರೈತರ ಆದಾಯವನ್ನು ಸ್ಥಿರಗೊಳಿಸುವುದು ಇದರ ಉದ್ದೇಶವಾಗಿದೆ.
ಗ್ರಾಮೀಣ ಭಂಡಾರನ್ ಯೋಜನೆ
ಈ ಯೋಜನೆಯ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಶೇಖರಣಾ ಸಾಮರ್ಥ್ಯವನ್ನು ರಚಿಸುವುದು.
ಕೃಷಿ ಉತ್ಪನ್ನಗಳ ಶ್ರೇಣೀಕರಣ, ಪ್ರಮಾಣೀಕರಣ ಮತ್ತು ಗುಣಮಟ್ಟ ನಿಯಂತ್ರಣವನ್ನು ಉತ್ತೇಜಿಸುವುದಾಗಿದೆ.
ಜಾನುವಾರು ವಿಮಾ ಯೋಜನೆ
ಈ ಯೋಜನೆಯು ಜಾನುವಾರು ಸಾಕುವ ರೈತರಿಗಾಗಿ ಇದೆ. ತಮ್ಮ ಪ್ರಾಣಿಗಳ ಸಾವಿನಿಂದ ಉಂಟಾಗುವ ನಷ್ಟವನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.
ಜಾನುವಾರುಗಳ ವಿಮಾ ಯೋಜನೆಯ ಮೂಲಕ ರೈತರು ಮುಂಜಾಗ್ರತಾ ಕ್ರಮವನ್ನು ಅನುಸರಿಸಬಹುದಾಗಿದೆ.
ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆಯ ಯೋಜನೆ
ಮೀನುಗಾರಿಕೆ ವಿಸ್ತರಣಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಾಯ ಮಾಡಲು ಮೀನುಗಾರಿಕೆ ವಲಯಕ್ಕೆ
ತರಬೇತಿ ನೀಡಲು ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆಯ ಯೋಜನೆಯನ್ನು ಪರಿಚಯಿಸಲಾಗಿದೆ.
ಮೀನುಗಾರರ ಕಲ್ಯಾಣ ರಾಷ್ಟ್ರೀಯ ಯೋಜನೆ
ಮೀನುಗಾರರಿಗೆ ಮನೆ, ಮನರಂಜನೆಗಾಗಿ ಸಮುದಾಯ ಭವನ ಮತ್ತು ಸಾಮಾನ್ಯ ಕೆಲಸದ ಸ್ಥಳ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಸೂಕ್ಷ್ಮ ನೀರಾವರಿ ನಿಧಿ (MIF)
ಕೃಷಿ ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿ ನಿಧಿಯನ್ನು ಪರಿಚಯಿಸಲಾಗಿದೆ.
ಈ ನಿಧಿಯನ್ನು ನಬಾರ್ಡ್ ಅಡಿಯಲ್ಲಿ ಸ್ಥಾಪಿಸಲಾಗಿದೆ.
ಇದು ಸೂಕ್ಷ್ಮ ನೀರಾವರಿಯನ್ನು ಉತ್ತೇಜಿಸಲು ರಾಜ್ಯಗಳಿಗೆ ರಿಯಾಯಿತಿ ದರದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ.