ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ವೈಫಲ್ಯ ಅಂದ್ರೆ ತಪ್ಪಾಗೋದಿಲ್ಲ.
ವಿರೋಧದ ನಡುವೆ ದಲಿತರಿಂದ ದೇವಸ್ಥಾನ ಪ್ರವೇಶ.! ಉತ್ಸವ ಮೂರ್ತಿ ಹೊರ ತಂದು ದೇವಸ್ಥಾನವನ್ನೆ ಬಿಟ್ಟುಕೊಟ್ಟ ಸವರ್ಣಿಯರು
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅರ್ಷದೀಪ್ ಸಿಂಗ್ ಒಂದು ಸಿಕ್ಸ್ ಸಿಡಿಸಿ ಗಮನ ಸೆಳೆದಿದ್ದರು. ಆದರೆ ಪಾಂಡ್ಯ ನಡೆಯಿಂದಾಗಿ ಅರ್ಷದೀಪ್ಗೆ ಹೆಚ್ಚಿನ ಬಾಲ್ಗಳನ್ನು ಎದುರಿಸಲು ಅವಕಾಶ ಸಿಕ್ಕಿರಲಿಲ್ಲ.
ಕೊನೆಯ ಮೂರು ಓವರ್ಗಳ ವೇಳೆ ಸ್ಟ್ರೈಕ್ ಬದಲಿಸಲು ಹಾರ್ದಿಕ್ ಪಾಂಡ್ಯ ನಿರಾಕರಿಸಿದ್ದರು. ಅದರಲ್ಲೂ 19ನೇ ಓವರ್ನ 2ನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ಸಿಂಗಲ್ ತೆಗೆಯುವ ಮೂಲಕ ಪಾಂಡ್ಯಗೆ ಸ್ಟ್ರೈಕ್ ನೀಡಿದ್ದರು. ಈ ವೇಳೆ ಹಾರ್ದಿಕ್ ಆಡಿದ ಮಾತುಗಳೇ ಈಗ ಟ್ರೋಲಿಗರಿಗೆ ಆಹಾರವಾಗಿದೆ.
ಅರ್ಷದೀಪ್ ಸಿಂಗ್ ಸಿಂಗಲ್ ತೆಗೆಯುತ್ತಿದ್ದಂತೆ ಹಾರ್ದಿಕ್ ಪಾಂಡ್ಯ, ಇನ್ನು ನಾನ್ ಸ್ಟ್ರೈಕ್ನಲ್ಲಿ ನಿಂತು ಎಂಜಾಯ್ ಮಾಡು ಎಂದಿದ್ದರು. ಅತೀ ಆತ್ಮವಿಶ್ವಾಸದ ಈ ಹೇಳಿಕೆಯು ಸ್ಟಂಪ್ ಮೈಕ್ನಲ್ಲಿ ಕೇಳಿ ಬಂದಿತ್ತು. ಆದರೆ ಇದಾದ ಬಳಿಕ 10 ಎಸೆತಗಳನ್ನು ಎದುರಿಸಿದ ಪಾಂಡ್ಯ ರನ್ಗಳಿಸಲು ಒದ್ದಾಡಿದರು.
19ನೇ ಓವರ್ನ ಮೂರನೇ ಎಸೆತದಿಂದ ಸ್ಟ್ರೈಕ್ ಪಡೆದ ಹಾರ್ದಿಕ್ ಪಾಂಡ್ಯ ನಾಲ್ಕು ಎಸೆತಗಳಲ್ಲಿ 1 ಬೈಸ್ ರನ್ ಮಾತ್ರ ಕಲೆಹಾಕಿದ್ದರು. ಅಲ್ಲದೆ ಕೊನೆಯ ಓವರ್ನಲ್ಲಿ ಮತ್ತೆ ಸ್ಟ್ರೈಕ್ಗೆ ಬಂದ ಹಾರ್ದಿಕ್ ಮೊದಲ 4 ಎಸೆತಗಳಲ್ಲಿ ಯಾವುದೇ ರನ್ಗಳಿಸಲು ಸಾಧ್ಯವಾಗಿರಲಿಲ್ಲ. ಇನ್ನು 5ನೇ ಎಸೆತದಲ್ಲಿ 2 ರನ್ಗಳಿಸಿದರೆ, ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು.