ಆಹಾರ ಅರಸಿ ಬಂದ ಒಂಟಿ ಸಲಗವೊಂದು ಜಮೀನುಗಳಿಗೆ ಲಗ್ಗೆ ಇಟ್ಟು ಟೊಮೆಟೊ, ತೆಂಗನ್ನು ತುಳಿದು ತಿಂದು ನಾಶಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ, ಕೋಟೆಕೆರೆಯಲ್ಲಿ ನಡೆದಿದೆ.
https://ainlivenews.com/sudden-fall-in-the-price-of-white-corn-a-big-disappointment-for-the-farmers-who-were-expecting-profit/
ಮಂಚಹಳ್ಳಿ ಗ್ರಾಮದ ಮಹೇಶ್, ಕೋಟೆಕೆರೆಯ ಮಾದೇಗೌಡ ಎಂಬವರಿಗೆ ಸೇರಿದ ಜಮೀನುಗಳಿಗೆ ಆನೆ ಲಗ್ಗೆ ಇಟ್ಟು ಫಸಲು ನಾಶ ಮಾಡಿದೆ.
ಮಹೇಶ್ ಅವರ ನಾಲ್ಕು ಎಕರೆ ಟೊಮೆಟೊ, ಮಾದೇಗೌಡ ಅವರಿಗೆ ಸೇರಿದ 3 ಎಕರೆ ಟೊಮೆಟೊ, ತೆಂಗಿನ ಮರಗಳನ್ನು ತುಳಿದು ನಾಶ ಮಾಡಿದೆ.
ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಕೊಡಬೇಕು. ದಾಳಿಯಾದ ಬಳಿಕ ಮಹಜರು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಮಹಾದೇವನಾಯಕ ಆಗ್ರಹಿಸಿದ್ದಾರೆ.