2024 ರ ಟಿ20 ವಿಶ್ವಕಪ್ 25ನೇ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಮುಖಾಮುಖಿಯಾಗುತ್ತಿವೆ
Renukaswamy murder Case: ನಾನೇನು ತಪ್ಪು ಮಾಡಿಲ್ಲ..ಮರ್ಡರ್ ಬಗ್ಗೆ ಬಾಯಿ ಬಿಡುತ್ತಿಲ್ಲ ಡೆವಿಲ್..!
ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಕಪ್ನ ಕೊನೆಯ ಪಂದ್ಯ ಇದಾಗಿದೆ ಆದರೆ ಅಮೆರಿಕ ತಂಡ ಇದೇ ಮೊದಲ ಬಾರಿಗೆ ಈ ಮೈದಾನದಲ್ಲಿ ಆಡಲು ಬಂದಿದೆ.
ಇಂದು, ನ್ಯೂಯಾರ್ಕ್ನ ನಸ್ಸೌ ಕೌಂಟಿಯಲ್ಲಿ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್ 25ನೇ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಮುಖಾಮುಖಿಯಾಗುತ್ತಿವೆ. ಈ ಕ್ರೀಡಾಂಗಣದಲ್ಲಿ ಟೂರ್ನಿಯ ಕೊನೆಯ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶವಿದೆ. ಉಭಯ ತಂಡಗಳು ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ತಲಾ 4 ಅಂಕಗಳನ್ನು ಗಳಿಸಿದ್ದು, ಇಂದು ಗೆದ್ದರೆ ಸೂಪರ್-8 ತಲುಪಲಿವೆ. ಕಾಕತಾಳೀಯವೆಂಬಂತೆ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದವು.