ಚಿಕ್ಕಮಗಳೂರು:- ಸಿಎಂ ಸಿದ್ದರಾಮಯ್ಯ ಅವರು, ಕಳೆದ ಒಂದು ವಾರದ ಹಿಂದಷ್ಟೇ ಕರ್ನಾಟಕಕ್ಕೆ ಬಂದಿದ್ದ ನಕ್ಸಲರು ಕಾಡಿನಿಂದ ಮತ್ತೆ ತಪ್ಪಿಸಿಕೊಂಡು ಹೋಗು ನಕ್ಸಲ್ ಚಟುವಟಿಕೆಯನ್ನು ಆರಂಭಿಸಿದ್ದನ್ನು ನಾವು ಸಹಿಸುವುದಿಲ್ಲ. ನಿಮಗೆ ಇನ್ನೂ ಒಂದು ಚಾನ್ಸ್ ಕೊಡುತ್ತೇವೆ. ಕೂಡಲೇ ಬಂದು ಸರ್ಕಾರಕ್ಕೆ ಶರಣಾಗಿ, ನಿಮಗೆ ಸರ್ಕಾರದಿಂದ ಮುಖ್ಯವಾಹಿನಿಗೆ ತರಲು ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದರು. ಸಿದ್ದರಾಮಯ್ಯ ನೀಡಿದ ಒಂದೇ ಒಂದು ಅವಾಜ್ಗೆ ನಕ್ಸಲರು ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡು ಪತ್ರವನ್ನು ಬರೆದಿದ್ದರು. ಅದರಂತೆ ಇಂದು ಜಿಲ್ಲಾಡಳಿತ ಮುಂದೆ 6 ನಕ್ಸಲರು ಶರಣಾಗಲಿದ್ದಾರೆ.
ಡಿನ್ನರ್ ಪಾಲಿಟಿಕ್ಸ್: ಔತಣಕೂಟ ದಿಢೀರ್ ಮುಂದೂಡಿದ್ದೇಕೆ ಸಚಿವ ಪರಮೇಶ್ವರ್!
ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ.
ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಶರಣಾಗತಿಗೆ ಸಮಯ ನಿಗದಿಯಾಗಿದೆ. ಬಂದೂಕು ಸಂಸ್ಕೃತಿ ಮೂಲಕ ನ್ಯಾಯ ಪಡೆಯಲು ಹೊರಟಿದ್ದ ನಕ್ಸಲರು ಹ್ಯಾಂಡ್ಸಪ್ ಮಾಡಿದ್ದು ಸಮಾಜದ ಮುಖ್ಯವಾಹಿನಿ ಬರಲು ಬಯಸಿದ್ದಾರೆ.
ಇಂದು ಬೆಳಗ್ಗೆ 6 ನಕ್ಸಲರು ಶರಣಾಗತಿಗೆ ತಯಾರಿ ನಡೆದಿದ್ದು ಶಾಂತಿಗಾಗಿ ನಾಗರಿಕ ಸಮಿತಿ ಸಂಪರ್ಕದಲ್ಲಿದ್ದಾರೆ. ಆದರೆ ನಕ್ಸಲರಾದ ಜಯಣ್ಣ, ರಾಜಣ್ಣ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.
6 ನಕ್ಸಲರ ಶರಣಾಗತಿ ಹಿನ್ನೆಲೆಯಲ್ಲಿ ಮಾಜಿ ನಕ್ಸಲರು, ಇಂಟಲಿಜೆನ್ಸ್ ಪೊಲೀಸರು, ಶರಣಾಗತಿ ಸಮಿತಿ ಸದಸ್ಯರು ಮಹತ್ವದ ಸಭೆ ನಡೆಸಿದ್ದಾರೆ. ಕಳಸ ತಾಲೂಕಿನ ಕುದುರೆಮುಖದಲ್ಲಿ ಬಂಜೆಗೆರೆ ಜಯಪ್ರಕಾಶ್, ನೂರ್ ಶ್ರೀಧರ್, ಶ್ರೀಪಾಲ್, ಪಾರ್ವತೀಶ ಬಿಳಿದಾಳೆ, ಇಂಟಲಿಜೆನ್ಸ್ ಎಸ್ಪಿ ಹರಿರಾಮ್ ಶಂಕರ್ ಅವರು ಮೀಟಿಂಗ್ ಮಾಡಿರೋ ಫೋಟೋ ಲಭ್ಯವಾಗಿದೆ.
ಬಂದೂಕಿನ ಮೂಲಕ ಮಾತನಾಡುತ್ತಿದ್ದ ಆದರ್ಶವಾದಿಗಳಿಗೆ ಕೊನೆಗೂ ಪಾಪಪ್ರಜ್ಞೆ ಕಾಡಿದ್ದು ಆಯುಧ ಕೆಳಗಿಳಿಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿವೆ.
ಒತ್ತುವರಿ ತೆರವು, ಕಸ್ತೂರಿರಂಗನ್ ವರದಿಗೆ ವಿರೋಧ, ವಿಕ್ರಂಗೌಡ ಎನ್ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆಗೆ ನಕ್ಸಲರು ಬೇಡಿಕೆ ಇಟ್ಟಿದ್ದಾರೆ