ಕನ್ನಡದ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ (Vasuki Vaibhav) ಇಂದು ವೈವಾಹಿಕ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ರಂಗಭೂಮಿ ಕಲಾವಿದೆ ಬೃಂದಾ (Brunda) ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿದ್ದರು. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ (Marriage) ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ.
ಮದುವೆ ಕುರಿತಂತೆ ವಾಸುಕಿ ಒಪ್ಪಿಕೊಂಡಿದ್ದರು. ತಾರಾ ಅವರಿಗೆ ‘ಅಯ್ಯೋ.. ಹೇಳಬೇಡಿ’ ಎಂದು ಕೇಳಿಕೊಂಡಿದ್ದರೂ, ವಿಷಯವಂತೂ ಬಹಿರಂಗವಾಗಿತ್ತು. ಆದರೆ, ಅಧಿಕೃತವಾಗಿ ಈ ವಿಷಯದ ಕುರಿತು ವಾಸುಕಿ ವೈಭವ್ ಅವರೇ ಅಧಿಕೃತವಾಗಿ ಹೇಳಬೇಕಿತ್ತು. ಇಂದು ಅವರು ಮದುವೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.