ವೈಕುಂಠ ಏಕಾದಶಿ, ಹಿಂದೂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದು. ಏಕಾದಶಿಯು ತಿಂಗಳಿನಲ್ಲಿ ಎರಡು ಬಾರಿ ಬರುತ್ತದೆ. ಆದರೆ ಮಾರ್ಗಶಿರ ಮಾಸದಲ್ಲಿ (ಡಿಸೆಂಬರ್-ಜನವರಿ), ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯು ವಿಶೇಷವಾಗಿದ್ದು ಅದನ್ನು ವೈಕುಂಠ ಏಕಾದಶಿ ಎನ್ನುತ್ತಾರೆ. ಈ ದಿನ ಶ್ರೀವಿಷ್ಣುವಿಗೆ ಸಮರ್ಪಿತವಾಗಿದೆ. ದೇಶದಾದ್ಯಂತ ಹಿಂದೂಗಳ ಪಾಲಿಗೆ ಏಕಾದಶಿ ಪವಿತ್ರ ದಿನವಾಗಿ ನಂಬಲಾಗಿದೆ.
ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ!
ದೇಶದ ಮೂಲೆ ಮೂಲೆಯಲ್ಲೂ ಗೋವಿಂದನ ಭಜನೆ ನಡೆಯುತ್ತಿದೆ. ಇಂದು ವೈಕುಂಠ ಏಕಾದಶಿಯ ಆಚರಣೆ ಮಾಡಲಾಗುತ್ತಿದೆ. ಈ ದಿನ ಕೆಲ ವಿಶೇಷ ಪೂಜೆಗಳನ್ನ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗಾದರೆ ವೈಕುಂಠ ಏಕಾದಶಿಯಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಶುಭ ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಯಾವ ವಸ್ತುಗಳನ್ನು ದಾನ ಮಾಡಬೇಕು?
- ವೈಕುಂಠ ಏಕಾದಶಿಯಂದು ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡಿದರೆ ಶ್ರೇಯಸ್ಕರ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.
- ಈ ದಿನ ತುಳಸಿ ಗಿಡ, ಕಂಬಳಿ, ಧಾನ್ಯ ದಾನ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.
- ಈ ದಿನ ಗೋವನ್ನು ದಾನ ಮಾಡುವ ಸಂಪ್ರದಾಯವೂ ಇದೆ. ಹೀಗೆ ಮಾಡುವುದರಿಂದ ಸಕಲ ಸಂಪತ್ತು ಸಿಗುತ್ತದೆ.. ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ನಂಬಿಕೆ ಇದೆ.
ವೈಕುಂಠ ಏಕಾದಶಿಯಂದು ಏನು ಮಾಡಬಾರದು?
- ವೈಕುಂಠ ಏಕಾದಶಿಯಂದು ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
- ಇಂದು ಸುಳ್ಳು ಹೇಳಬೇಡಿ, ಕೋಪಗೊಳ್ಳಬೇಡಿ.
- ಈ ದಿನ ಮಾಂಸಾಹಾರ ಸೇವಿಸಬೇಡಿ.
- ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಬೇಡಿ.
ವೈಕುಂಠ ಏಕಾದಶಿಯಂದು ಭಕ್ತರು ದಿನವಿಡೀ ಉಪವಾಸ ಮಾಡಬೇಕು. ಇದರಿಂದ ವಿಷ್ಣುವಿನ ಆಶೀರ್ವಾದ ನಿಮಗೆ ಸಿಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಈ ಸಮಯದಲ್ಲಿ ಪವಿತ್ರ ಗ್ರಂಥಗಳನ್ನು ಓದಬೇಕು. ಪ್ರಮುಖ ಮಂತ್ರಗಳನ್ನು ಪಠಿಸುವುದು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಮಂತ್ರಗಳನ್ನು ಪಠಿಸುವುದು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ.