ಎಲ್ಲರೂ ಸಂವಹನಕ್ಕಾಗಿ ಭಾಷೆಯನ್ನು ಬಳಸುತ್ತೇವೆ. ಆದರೆ ಶ್ರವಣ ದೋಷ ಇರುವವರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಸಂಜ್ಞೆಯ ಮೂಲಕ ಅವರು ಸಂವಹನ ಮಾಡುತ್ತಾರೆ. ದೃಶ್ಯ ಸೂಚನೆಗಳನ್ನು ಕೈ ಸನ್ನೆಗಳು, ಸಂಕೇತಗಳು, ಮುಖದ ಅಭಿವ್ಯಕ್ತಿಗಳು ಮತ್ತು ದೇಹದ ಚಲನೆಯ ಮೂಲಕ ಹೇಳುವುದಕ್ಕೆ ಸಂಕೇತ ಭಾಷೆಗಳನ್ನು ಬಳಸಲಾಗುತ್ತದೆ. ಒಟ್ಟು 300ಕ್ಕೂ ಹೆಚ್ಚು ವಿಭಿನ್ನ ಸಂಕೇತ ಭಾಷೆಗಳಿವೆ. ಪ್ರತಿಯೊಂದು ಸಂಕೇತ ಭಾಷೆಗಳಲ್ಲಿಯೂ ಸಹ ಚಿಹ್ನೆಗಳು ಅಥವಾ ಸನ್ನೆಗಳು ವಿಭಿನ್ನವಾಗಿರುತ್ತವೆ.
ಇಂಟನ್ರ್ಯಾಷನಲ್ ಡೇ ಆಫ್ ಸೈನ್ ಲ್ಯಾಂಗ್ವೇಜಸ್ ಅನ್ನು ಆಚರಿಸುವ ಪ್ರಸ್ತಾಪವು ವಿಶ್ವ ಕಿವಿ ಕೇಳದಿರುವವರ ಒಕ್ಕೂಟದಿಂದ ಬಂದಿತು. WFD ಕಿವುಡ ಜನರ 135 ರಾಷ್ಟ್ರೀಯ ಸಂಘಗಳ ಒಕ್ಕೂಟವಾಗಿದೆ. ಫೆಡರೇಶನ್ ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಕಿವುಡ ಜನರನ್ನು ಪ್ರತಿನಿಧಿಸುತ್ತದೆ ಕಿವಿ ಕೇಳದಿರುವವರ ಅಂತರರಾಷ್ಟ್ರೀಯ ವಾರದ ಭಾಗವಾಗಿ 2018 ರಲ್ಲಿ ಮೊದಲ ಅಂತರರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು ಆಚರಿಸಲಾಯಿತು. ಇದು ಸೆಪ್ಟೆಂಬರ್ 1958 ರಲ್ಲಿ ಮೊದಲು ಆಚರಿಸಲಾಯ್ತು.
Pitru Paksha 2024: ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..! ಪಿತೃ ದೋಷ ಬರುತ್ತೆ!
ಈ ದಿನವನ್ನು ವಾರ್ಷಿಕವಾಗಿ ಸೆಪ್ಟೆಂಬರ್ 23 ರಂದು ಗುರುತಿಸಲಾಗುತ್ತದೆ. ಈ ವರ್ಷ ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದ ಐದನೇ ಆಚರಣೆಯನ್ನು ಗುರುತಿಸುತ್ತದೆ. ಸಂಕೇತ ಭಾಷೆಗಳು ಸನ್ನೆಗಳು ಅಥವಾ ಚಿಹ್ನೆಗಳ ಬಳಕೆಯ ಮೂಲಕ ನಿಮ್ಮ ಸಂದೇಶವನ್ನು ರವಾನಿಸುವ ದೃಶ್ಯ ಭಾಷೆಗಳಾಗಿವೆ. ಪ್ರತಿಯೊಂದು ದೇಶವು ತನ್ನದೇ ಆದ ಸಂಕೇತ ಭಾಷೆಯನ್ನು ಹೊಂದಿದೆ, ಉದಾಹರಣೆಗೆ- US ನಲ್ಲಿ, ಇದು ಅಮೇರಿಕನ್ ಸಂಕೇತ ಭಾಷೆಯಾಗಿದೆ ಆದರೆ Uk ನಲ್ಲಿ ಇದು ಬ್ರಿಟಿಷ್ ಸಂಕೇತ ಭಾಷೆಯಾಗಿದೆ.
ಇಂಟನ್ರ್ಯಾಷನಲ್ ಡೇ ಆಫ್ ಸೈನ್ ಲ್ಯಾಂಗ್ವೇಜ್ ಕಿವಿ ಕೇಳದ ಜನರಿಗೆ ಈ ಸಂವಹನ ಮಾಧ್ಯಮವನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ದಿನವು ಸಂಕೇತ ಭಾಷೆಯ ಬೆಳವಣಿಗೆಗೆ ಒಂದು ಹಂತವನ್ನು ನೀಡುತ್ತದೆ. ಇದು ಅಂತರಾಷ್ಟ್ರೀಯವಾಗಿ ಒಪ್ಪಿದ ಅಭಿವೃದ್ಧಿ ಗುರಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಾಧನೆಗಳ ಮೇಲೆ ಕೇಂದ್ರೀಕರಿಸುತ್ತದೆ. ISL (ಭಾರತೀಯ ಸಂಕೇತ ಭಾಷೆ) ಕಲಿಕೆ ಸಂವಹನಕ್ಕೆ ಸಹಾಯಕವಾಗಿದೆ. ವ್ಯಕ್ತಿಗಳಿಬ್ಬರ ನಡುವಿನ ಅಂತರವನ್ನು ನಿವಾರಿಸುತ್ತದೆ. ಪ್ರಸ್ತುತ 300ಕ್ಕಿಂತ ಕಡಿಮೆ ISL ಪ್ರಮಾಣೀಕೃತ ವ್ಯಾಖ್ಯಾನಕಾರರಿದ್ದಾರೆ. ಭಾಷೆಯನ್ನು ಚೆನ್ನಾಗಿ ಕಲಿಯಲು ನಮಗೆ ಸಹಾಯ ಮಾಡಲು ISL ದೃಶ್ಯ ನಿಘಂಟು ಕೂಡಾ ಲಭ್ಯವಿದೆ.